ಮುಂಬೈ (ಮಹಾರಾಷ್ಟ್ರ):ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಅಬ್ಬರದ ಬ್ಯಾಟಿಂಗ್ ಮಾಡುತ್ತಿದೆ. ನೆದರ್ಲೆಂಡ್ ವಿರುದ್ಧ ಹರಿಣ ಪಡೆಯ ಬ್ಯಾಟರ್ಗಳು ಮಂಕಾಗಿದ್ದು ಬಿಟ್ಟರೆ, ಉಳಿದ ನಾಲ್ಕು ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸಿದ್ದಾರೆ. ಎದುರಾಳಿ ತಂಡ ಮತ್ತು ಬೌಲರ್‌ಗಳು ಯಾರೆಂದು ನೋಡದೇ ಎಲ್ಲಾ ಬಾಲ್ಗಳನ್ನೂ ಬೌಂಡರಿ ಗೆರೆ ದಾಟಿಸುವಲ್ಲಿ ಬ್ಯಾಟರ್ಗಳು ಯಶಸ್ಸು ಕಾಣುತ್ತಿದ್ದಾರೆ. ಅದರಲ್ಲೂ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಪ್ರಸ್ತುತ ವಿಶ್ವಕಪ್ನಲ್ಲಿ ಗೋಲ್ಡನ್ ಫಾರ್ಮ್ ಪ್ರದರ್ಶಿಸುತ್ತಿದ್ದು, ಆಡಿದ ಐದು ಪಂದ್ಯದಲ್ಲಿ ಮೂರು ಶತಕ ಗಳಿಸಿದ್ದಾರೆ.
12,000 ರನ್ ಪೂರೈಸಿದ ಡಿ ಕಾಕ್: ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ಅಬ್ಬರದ 174 ರನ್‌ಗಳ ಇನ್ನಿಂಗ್ಸ್ ಆಡಿದ ಕ್ವಿಂಟನ್ ಡಿ ಕಾಕ್ ಅಂತರರಾಷ್ಟ್ರೀಯ 12,000 ರನ್ ಪೂರೈಸಿದ ಆಟಗಾರ ಎಂಬ ಖ್ಯಾತಿ ಪಡೆದರು. ದಕ್ಷಿಣ ಆಫ್ರಿಕಾ ಪರ 12,000 ಗಡಿ ದಾಟಿದ ಮೊದಲ ವಿಕೆಟ್‌ಕೀಪರ್-ಬ್ಯಾಟರ್ ಹಾಗು ಏಳನೇ ಬ್ಯಾಟರ್ ಆಗಿದ್ದಾರೆ. ಡಿ ಕಾಕ್ ಸದ್ಯ 284 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 12,160 ರನ್ ಗಳಿಸಿದ್ದಾರೆ.
ಡಿ ಕಾಕ್ ಅವರು ಟೆಸ್ಟ್ ಮಾದರಿಯಲ್ಲಿ 54 ಪಂದ್ಯಗಳಲ್ಲಿ 70.93 ಸ್ಟ್ರೈಕ್ ರೇಟ್‌ನೊಂದಿಗೆ 3300 ರನ್, ಏಕದಿನ ಸ್ವರೂಪದಲ್ಲಿ 150 ಪಂದ್ಯಗಳಿಂದ 96.75 ಸ್ಟ್ರೈಕ್ ರೇಟ್‌ನೊಂದಿಗೆ 6,583 ರನ್ ಮತ್ತು ಟಿ 20 ಮಾದರಿಯಲ್ಲಿ 80 ಪಂದ್ಯಗಳಿಂದ 137.33 ಸ್ಟ್ರೈಕ್ ರೇಟ್‌ನೊಂದಿಗೆ 2,277 ರನ್ ಪೇರಿಸಿದ್ದಾರೆ.