ನವದೆಹಲಿ: ವಿರಾಟ್ ಕೊಹ್ಲಿಯ ಅತ್ಯುತ್ತಮ ಗುಣಮಟ್ಟದ ಬ್ಯಾಟಿಂಗ್ ಮತ್ತು ಅತ್ಯುತ್ತಮ ಕೌಶಲ್ಯಗಳೊಂದಿಗೆ ಮುನ್ನಡೆಸುವ ಅವರ ನಾಯಕತ್ವ ಭಾರತ ತಂಡಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ನೂತನ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಟಿ-20 ವಿಶ್ವಕಪ್ ಮುಗಿಯುತ್ತಿದ್ದಂತೆ ಭಾರತ ಟಿ-20 ತಂಡದ ನೇತೃತ್ವಹಿಸಿಕೊಂಡಿರುವ ರೋಹಿತ್ ಶರ್ಮಾರನ್ನು ಬುಧವಾರ ಬಿಸಿಸಿಐ ಆಯ್ಕೆ ಸಮಿತಿ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿತ್ತು.
"ಒಬ್ಬ ಬ್ಯಾಟರ್ ಆಗಿ ಆತನ (ಕೊಹ್ಲಿ) ಅವಶ್ಯಕತೆ ತಂಡಕ್ಕೆ ಅವಶ್ಯಕವಾಗಿದೆ. ಟಿ-20 ಕ್ರಿಕೆಟ್ನಲ್ಲಿ 50ರ ಸರಾಸರಿ ಹೊಂದುವುದು ತಮಾಷೆಯಲ್ಲ. ನಂಬಲಾಸಾಧ್ಯವಾದದ್ದು. ಅವರು ತಮ್ಮ ಅನುಭವದಿಂದ ಭಾರತ ತಂಡವನ್ನು ಹಲವಾರು ಕಷ್ಟದ ಸಂದರ್ಭದಲ್ಲಿ ಹೊರ ತಂದಿದ್ದಾರೆ" ಎಂದು ಬ್ಯಾಕ್ಸ್ಟೇಜ್ ವಿತ್ ಬೋರಿಯಾ ಯುಟ್ಯೂಬ್ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಕೊಹ್ಲಿಯನ್ನು ಕೊಂಡಾಡಿದ್ದಾರೆ.