ನವದೆಹಲಿ:2021ರ ಐಪಿಎಲ್ನಲ್ಲಿ ಗರಿಷ್ಠ ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿರುವ ಹರ್ಷಲ್ ಪಟೇಲ್ ಮುಂದಿನ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹರ್ಷಲ್ ಪಟೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿ 15 ಪಂದ್ಯಗಳಿಂದ 32 ವಿಕೆಟ್ ಪಡೆದು ಕಿತ್ತಳೆ ಟೋಪಿ ಪಡೆದುಕೊಂಡಿದ್ದರು.
2022ರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ರನ್ನು ಮಾತ್ರ ರಿಟೈನ್ ಮಾಡಿಕೊಂಡಿತ್ತು. ಇದೀಗ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ 2022ರ ಆವೃತ್ತಿಗೆ ಮೆಗಾ ಹರಾಜು ನಡೆಯಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಕ್ರಿಕ್ಟ್ರ್ಯಾಕರ್ ಜೊತೆಗಿನ ಸಂದರ್ಶನದ ವೇಳೆ ಹರಿಯಾಣ ಮೂಲದ ಬೌಲರ್ಗೆ ಮುಂದಿನ ಆವೃತ್ತಿಯಲ್ಲಿ ಯಾವ ಫ್ರಾಂಚೈಸಿ ಪರ ಆಡಲು ಇಚ್ಛಿಸುತ್ತೀರಾ ಎಂದು ಕೇಳಿದ್ದಕ್ಕೆ, ತಾವೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದಕ್ಕೆ ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ. ಕ್ರಿಕೆಟಿಗನಾಗಿ ನನಗೆ ಎಂಎಸ್ ಧೋನಿ ಸ್ಪೂರ್ತಿಯಾಗಿದ್ದಾರೆ. ಅವರು ನನ್ನ ನೆಚ್ಚಿನ ಸಾರ್ವಕಾಲಿಕ ನಾಯಕ ಎಂದು ಪಟೇಲ್ ಹೇಳಿದ್ದಾರೆ.
ನನ್ನ ವೃತ್ತಿ ಜೀವನ ಬದಲಿಸಿದ್ದು ಆರ್ಸಿಬಿ:ನನ್ನನ್ನು ಈ ಬಾರಿ ರಿಟೈನ್ ಮಾಡಿಕೊಳ್ಳದಿದ್ದಕ್ಕೆ ಮೈಕ್ ಹೆಸನ್ ಕರೆ ಮಾಡಿ ಪರ್ಸ್ ಮ್ಯಾನೇಜ್ಮೆಂಟ್ನಿಂದಾಗಿ ರಿಟೈನ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಅವರೂ ಕೂಡ ನನ್ನನ್ನು ಮರಳಿ ಪಡೆಯಲು ಇಷ್ಟಪಡುತ್ತಾರೆ. ನಾನೂ ಕೂಡ ಮತ್ತೆ ಆರ್ಸಿಬಿಗೆ ಮರಳುವುದಕ್ಕೆ ಮತ್ತು ತಂಡದ ಪರ ಆಡುವುದಕ್ಕೆ ಇಷ್ಟಪಡುತ್ತೇನೆ. ಏಕೆಂದರೆ ಆರ್ಸಿಬಿ ನನ್ನ ವೃತ್ತಿ ಜೀವನವನ್ನಷ್ಟೆ ಅಲ್ಲ ನನ್ನ ಸಂಪೂರ್ಣ ಜೀವನವನ್ನು ಬದಲಾಯಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕ್ರಿಕೆಟಿಗ ರವಿ ಬಿಷ್ಣೋಯ್ಗೆ ಡಬಲ್ ಧಮಾಕಾ.. ಭಾರತ ರಾಷ್ಟ್ರೀಯ ತಂಡದಲ್ಲಿ ಸ್ಥಾನ, ಐಪಿಎಲ್ನಲ್ಲಿ 4 ಕೋಟಿಗೆ ಖರೀದಿ