ಕರ್ನಾಟಕ

karnataka

ETV Bharat / sports

ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ! - ಐಪಿಎಲ್ ಟಾಪ್ 4

ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂದ್ಯವನ್ನು ಸೋಲುವ ಮೂಲಕ ಪ್ಲೇ ಆಫ್​ ಪ್ರವೇಶಿಸಲು ತನ್ನ ಕೈಯಲ್ಲಿದ್ದ ಅವಕಾಶವನ್ನು ಕಳೆದುಕೊಂಡಿದ್ದರು. ಒಂದು ವೇಳೆ, ಆ ಪಂದ್ಯವನ್ನು ಗೆದ್ದಿದ್ದರೆ, ಚೆನ್ನೈ ವಿರುದ್ಧ ಸಾಧಾರಣ ಗೆಲುವು ಸಾಧಿಸಿ 2 ಅಂಕಪಡೆದಿದ್ದರೆ ಪ್ಲೇ ಆಫ್​ ಪ್ರವೇಶಿಸಬಹುದಿತ್ತು. ಆದರೆ ದುರಾದೃಷ್ಟವಶಾತ್ ಕೇವಲ 6 ರನ್​ಗಳಿಂದ ಕಿಂಗ್ಸ್ ಸೋಲು ಕಂಡಿತು.

Punjab Kings
ಪಂಜಾಬ್ ಕಿಂಗ್ಸ್ ಪ್ಲೇ ಆಫ್​ ಕನಸು

By

Published : Oct 5, 2021, 3:54 PM IST

ದುಬೈ: ಕೆಎಲ್ ರಾಹುಲ್ ನೇತೃತ್ವದ ಪಂಜಾಬ್​ ಕಿಂಗ್ಸ್​ ತಂಡ ನೇರವಾಗಿ ಪ್ಲೇ ಆಫ್​ ದಾರಿ ಬಹುತೇಕ ಮುಚ್ಚಿದೆ. ಆದರೆ, ಅಕ್ಟೋಬರ್​ 7 ರಂದು ನಡೆಯಲಿರುವ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಬೃಹತ್ ಅಂತರದಿಂದ ಗೆದ್ದು, ಇತರ ಕೆಲವು ಪಂದ್ಯಗಳ ಫಲಿತಾಂಶಗಳು ಅವರ ಪರವಾಗಿ ಬಂದರೆ 4ನೇ ತಂಡವಾಗಿ ಪ್ಲೇ ಆಪ್ ಪ್ರವೇಶಿಸುವ ಅವಕಾಶ ಸಿಗಲಿದೆ.

ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂದ್ಯವನ್ನು ಸೋಲುವ ಮೂಲಕ ಪ್ಲೇ ಆಫ್​ ಪ್ರವೇಶಿಸಲು ತನ್ನ ಕೈಯಲ್ಲಿದ್ದ ಅವಕಾಶ ಕಳೆದುಕೊಂಡಿದ್ದರು. ಒಂದು ವೇಳೆ ಆ ಪಂದ್ಯವನ್ನು ಗೆದ್ದಿದ್ದರೆ, ಚೆನ್ನೈ ವಿರುದ್ಧ ಸಾಧಾರಣ ಗೆಲುವು ಸಾಧಿಸಿ 2 ಅಂಕ ಪಡೆದಿದ್ದರೆ ಪ್ಲೇ ಆಫ್​ ಪ್ರವೇಶಿಸಬಹುದಿತ್ತು. ಆದರೆ, ದುರಾದೃಷ್ಟವಶಾತ್ ಕೇವಲ 6 ರನ್​ಗಳಿಂದ ಕಿಂಗ್ಸ್ ಸೋಲು ಕಂಡಿತು.

ಇದೀಗ ಕೊನೆಯ ಲೀಗ್​ ಪಂದ್ಯವನ್ನು ಗೆದ್ದರೂ ಪಂಜಾಬ್ 12 ಅಂಕಗಳನ್ನು ಗಳಿಸಿಕೊಳ್ಳಬಹುದು. ಆದರೆ, ಇದು ಪ್ಲೇ ಆಫ್​ ಪ್ರವೇಶಿಸಲು ಸಾಧ್ಯವಾಗದು. ಋಣಾತ್ಮಕ ರನ್​ರೇಟ್​ ಹೊಂದಿರವ ರಾಹುಲ್​ ಪಡೆ ಬೃಹತ್ ಅಂತರದಿಂದ ಸಿಎಸ್​ಕೆ ವಿರುದ್ಧ ಗೆಲುವು ಸಾಧಿಸಬೇಕು. ಅಲ್ಲದೇ ಕೆಕೆಆರ್​, ಮುಂಬೈ ಮತ್ತು ರಾಜಸ್ಥಾನ್​ ತಂಡಗಳು ಕೂಡ 12 ಅಂಕಗಳೊಂದಿಗೆ ಲೀಗ್​ನಲ್ಲಿ ಅಂತ್ಯವಾಗಬೇಕು.

ಹೇಗಾದರೆ ಪಂಜಾಬ್​ ದಾರಿ ಸುಗಮ

ಮುಂಬೈ ಮತ್ತು ರಾಜಸ್ಥಾನ್ ತಂಡಗಳು ಉಳಿದಿರುವ ತಮ್ಮ 2 ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಗೆಲ್ಲಬೇಕು. ತಮ್ಮ ಕೊನೆಯ ಪಂದ್ಯವನ್ನು ಸೋಲು ಕಾಣಬೇಕು. ಮಂಗಳವಾರ ನಡೆಯುವ ಪಂದ್ಯದಲ್ಲಿ ಮುಂಬೈ ರಾಜಸ್ಥಾನ್​ ವಿರುದ್ಧ ಗೆದ್ದು ತಮ್ಮ ಕೊನೆಯ ಪಂದ್ಯವನ್ನು ಹೈದರಾಬಾದ್​ ವಿರುದ್ಧ ಸೋಲಬೇಕು.

ರಾಜಸ್ಥಾನ್​ ತಂಡ ಈ ಪಂದ್ಯವನ್ನು ಸೋತ ನಂತರ ತನ್ನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಉತ್ತಮ ರನ್​ರೇಟ್​ನಿಂದ ಗೆಲ್ಲಬೇಕು. ಆಗ ನಾಲ್ಕು ತಂಡಗಳ ಅಂಕ 12ಕ್ಕೆ ಬಂದು ನಿಲ್ಲಲಿದೆ. ಯಾವ ತಂಡ ಉತ್ತಮ ರನ್​ರೇಟ್​ ಹೊಂದಿರುತ್ತದೋ ಆ ತಂಡ 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ.

ಪ್ರಸ್ತುತ ಪಂಜಾಬ್ ರನ್​ರೇಟ್​ ಮುಂಬೈ ಮತ್ತು ರಾಜಸ್ಥಾನ್​ ತಂಡಕ್ಕಿಂತ ಮುಂದಿದೆ. ಮತ್ತು ಕೋಲ್ಕತ್ತಾಕ್ಕಿಂತ ಕಡಿಮೆಯಿದೆ. ಪಂಜಾಬ್ ಸಿಎಸ್​ಕೆ ವಿರುದ್ಧ ಬೃಹತ್​ ಅಂತರದಿಂದ ಗೆಲ್ಲುವುದರ ಜೊತೆಗೆ ಕೋಲ್ಕತ್ತಾ ತಂಡ ರಾಯಲ್ಸ್​ ವಿರುದ್ಧ ಹೀನಾಯ ಸೋಲಿಗಾಗಿ ಪ್ರಾರ್ಥಿಸಬೇಕಿದೆ.

ಇದನ್ನು ಓದಿ:ಮುಂಬೈ vs ರಾಜಸ್ಥಾನ್ ಮುಖಾಮುಖಿ​: ಗೆದ್ದವರಿಗೆ ಪ್ಲೇ ಆಫ್​ ದಾರಿ ಸುಗಮ

ABOUT THE AUTHOR

...view details