ಕ್ವೀನ್ಸ್ಲ್ಯಾಂಡ್ (ಆಸ್ಟ್ರೇಲಿಯಾ):ಬ್ಯಾಟಿಂಗ್ ಮಾಡ್ತಿದ್ದ ವೇಳೆ ವಿಕೆಟ್ ಒಪ್ಪಿಸಿದ್ರೂ ಕೂಡ ಕೆಲ ಆಟಗಾರರು ಮೈದಾನ ಬಿಡದೇ ಅಂಪೈರ್ ಜೊತೆ ಕಿರಿಕ್ ಮಾಡಿಕೊಂಡಿರುವ ಅನೇಕ ಘಟನೆಗಳು ನಮ್ಮ ಮುಂದಿವೆ. ಇದರ ಮಧ್ಯೆ ಟೀಂ ಇಂಡಿಯಾ ಮಹಿಳಾ ಬ್ಯಾಟರ್ ನಿರ್ಧಾರ ಎಲ್ಲರ ಮನಗೆದ್ದಿದೆ.
ಭಾರತ-ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಪಂದ್ಯದ ವೇಳೆ ಅಂಪೈರ್ ನಾಟೌಟ್ ಎಂಬ ತೀರ್ಪು ನೀಡಿದ್ರೂ ಕೂಡ ಟೀಂ ಇಂಡಿಯಾ ಬ್ಯಾಟರ್ ಪೂನಂ ರಾವತ್ ಮೈದಾನದಿಂದ ಹೊರನಡೆದಿದ್ದಾರೆ. ಈ ವೇಳೆ ಮೈದಾನದಲ್ಲಿದ್ದ ಅಂಪೈರ್ ಹಾಗೂ ಎದುರಾಳಿ ಆಟಗಾರರು ಅರೆಕ್ಷಣ ಅಚ್ಚರಿಗೊಳಗಾದರು.
36 ರನ್ಗಳಿಕೆ ಮಾಡಿ ಬ್ಯಾಟ್ ಮಾಡ್ತಿದ್ದ ಪೂನಂ ಮೊಲಿನಿಕ್ಸ್ ಎಸೆದ ಓವರ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ್ದಾರೆ. ಆದರೆ ಈ ಬಗ್ಗೆ ಅಂಪೈರ್ಗೆ ಸರಿಯಾಗಿ ಗೊತ್ತಾಗದ ಕಾರಣ ಯಾವುದೇ ರೀತಿಯ ತೀರ್ಪು ನೀಡಿಲ್ಲ. ಆದರೆ ರಾವತ್ ಮಾತ್ರ ಕ್ಷಣಾರ್ಧದಲ್ಲೇ ಮೈದಾನ ತೊರೆದರು.
ಪೂನಂ ರಾವತ್ ನಿರ್ಧಾರಕ್ಕೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಖುದ್ದಾಗಿ ಈ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದೆ.