ಹರಾರೆ : ಜರ್ಮನಿಯ ಸ್ಪೋರ್ಟ್ಸ್ ಪರಿಕರಗಳ ತಯಾರಿಕಾ ಸಂಸ್ಥೆ ಜಿಂಬಾಬ್ವೆ ಕ್ರಿಕೆಟಿಗರಿಗೆ ಶೂಗಳನ್ನು ಒದಗಿಸಿಕೊಡುವ ಮೂಲಕ ಹರಿದ ಶೂಗಳನ್ನು ರಿಪೇರಿ ಮಾಡಿಕೊಂಡು ಆಡುತ್ತಿದ್ದ ಜಿಂಬಾಬ್ವೆ ಆಟಗಾರರ ಮೊಗದಲ್ಲಿ ನಗು ತರಿಸಿದೆ.
ಎರಡು ದಿನಗಳ ಹಿಂದೆ ಜಿಂಬಾಬ್ವೆ ಆಲ್ರೌಂಡರ್ ರಿಯಾನ್ ಬರ್ಲ್ ಹರಿದ ಶೂ ಫೋಟೋವನ್ನು ಶೇರ್ ಮಾಡಿಕೊಂಡು, ನಮಗೆ ಯಾರಾದರೂ ಪ್ರಾಯೋಜಕರು ಸಿಕ್ಕರೆ, ಪ್ರತಿ ಸರಣಿಯ ನಂತರ ನಮ್ಮ ಹರಿದ ಶೂಗಳಿಗೆ ಅಂಟು ಹಾಕುವ ಪರಿಸ್ಥಿತಿ ಇರುವುದಿಲ್ಲ" ಎಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿ ಜಿಂಬಾಬ್ವೆ ಕ್ರಿಕೆಟಿಗರ ಸ್ಥಿತಿಗೆ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳು ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಇದೇ ಸಂದರ್ಭದಲ್ಲಿ ಪೂಮಾ ಸಂಸ್ಥೆ ಬರ್ಲ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ, ಗಮ್ ತೆಗೆದು ಪಕ್ಕಕ್ಕೆ ಇಡುವ ಸಮಯ ಬಂದಿದೆ, ನಾವು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ತಿಳಿಸಿತ್ತು.