ಕರ್ನಾಟಕ

karnataka

ETV Bharat / sports

ಯುವ ಕ್ರಿಕೆಟ್‌ ಆಟಗಾರ್ತಿಗೆ ಕೋಚ್‌ನಿಂದ ಲೈಂಗಿಕ ಕಿರುಕುಳ: ಪ್ರಕರಣ ದಾಖಲು - ಕ್ರಿಕೆಟರ್​ ಮೇಲೆ ಲೈಂಗಿಕ ಕಿರುಕುಳ ಆರೋಪ

ಹಿರಿಯ ಕ್ರಿಕೆಟರ್​​ ಮತ್ತು ತರಬೇತುದಾರರಾದ ತಮರೈಕಣ್ಣನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

Puducherry coach booked for sexually harassing girl cricketer
ಕ್ರಿಕೆಟ್​ ಕೋಚ್​ರಿಂದ ಲೈಂಗಿಕ ಕಿರುಕುಳ: ದೂರು ನೀಡಿದ ಆಟಗಾರ್ತಿ

By

Published : Oct 21, 2021, 11:38 AM IST

ಪುದುಚೇರಿ:ಪುದುಚೇರಿಯ ಹಿರಿಯ ಕ್ರಿಕೆಟ್ ಆಟಗಾರ ಮತ್ತು ತರಬೇತುದಾರರಾದ ತಮರೈಕಣ್ಣನ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. 16 ವರ್ಷದ ಯುವ ಆಟಗಾರ್ತಿ ಕಣ್ಣನ್ ವಿರುದ್ಧ ಚೈಲ್ಡ್‌ಲೈನ್‌ಗೆ ದೂರು ನೀಡಿದ್ದಾಳೆ.​

ತಮರೈಕಣ್ಣನ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತರಬೇತಿ ನೀಡುತ್ತಿದ್ದ ತಮ್ಮರೈಕಣ್ಣನ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಟಗಾರ್ತಿ ದೂರಿದ್ದಾಳೆ.

ತನ್ನನ್ನು ಪ್ರೀತಿಸುತ್ತಿರುವುದಾಗಿ ತರಬೇತುದಾರ ತಮರೈಕಣ್ಣನ್ ಹಲವು ಸಂದೇಶಗಳನ್ನು ಕಳುಹಿಸಿದ್ದಾರೆ. ಪ್ರೀತಿಗೆ ಒಪ್ಪದಿದ್ದರೆ ನಿನಗೆ ತರಬೇತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಭುಜ, ಬೆನ್ನು ಮತ್ತು ಎದೆಯನ್ನು ಸ್ಪರ್ಶಿಸುವ ಮೂಲಕ ಕಿರುಕುಳ ನೀಡಿದ್ದಾನೆ ಬಾಲಕಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಈ ವಿಷಯವನ್ನು ಅಸೋಸಿಯೇಷನ್ ​​ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕ್ರಿಕೆಟರ್​ ದೂರಿರುವ ಹಿನ್ನೆಲೆಯಲ್ಲಿ ಪುದುಚೇರಿ ಕ್ರಿಕೆಟ್ ಅಸೋಸಿಯೇಶನ್​ (ಸಿಎಪಿ)ನ ನಾಲ್ವರು ಪದಾಧಿಕಾರಿಗಳ ವಿರುದ್ಧವೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಆಟಗಾರ್ತಿಯು ಯಾರ ವಿರುದ್ಧವೂ ಲೈಂಗಿಕ ಕಿರುಕುಳದ ದೂರು ನೀಡಿಲ್ಲ. ಆದರೆ ತಮೈರಕ್ಕಣ್ಣನ್ ತನ್ನ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆಕೆಯ ತಾಯಿ ದೂರು ನೀಡಿದ್ದಾರೆ ಎಂದು ಪುದುಚೇರಿ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಚಂದ್ರು ಹೇಳಿದ್ದಾರೆ. ಬಳಿಕ ಅಸೋಸಿಯೇಷನ್ ​​ಒಂದು ವರ್ಷ ಕಾಲ ತಮರೈಕಣ್ಣನ್ ಅವರನ್ನು ಅಮಾನತು ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಆಟಗಾರ್ತಿಯ ದೂರನ್ನು ಚೈಲ್ಡ್ ಲೈನ್ ಕಡೆಯಿಂದ ಮೆಟ್ಟುಪಾಳ್ಯಂ ಪೊಲೀಸರಿಗೆ ರವಾನಿಸಲಾಗಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ:ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಸ್ವಿಗ್ಗಿ ಫುಡ್‌ ಡೆಲಿವರಿ ಬಾಯ್

ABOUT THE AUTHOR

...view details