ಕರಾಚಿ: ಪಿಎಸ್‌ಎಲ್ ಫ್ರಾಂಚೈಸಿಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಪತ್ರ ಬರೆದಿದ್ದು, ಆರನೇ ಆವೃತ್ತಿಯ ಲೀಗ್ ಮರುನಿಗದಿಪಡಿಸಿದ ಪಂದ್ಯಗಳನ್ನು ಕರಾಚಿಯಿಂದ ಯುಎಇಗೆ ಸ್ಥಳಾಂತರಿಸುವಂತೆ ಕೋರಿವೆ.
ಆಟಗಾರರು ಮತ್ತು ಅಧಿಕಾರಿಗಳಲ್ಲಿ ಕೋವಿಡ್ ಪ್ರಕರಣಗಳಿಂದಾಗಿ ಪಿಸಿಬಿ, ಪಿಎಸ್ಎಲ್ ಅನ್ನು ಮಾರ್ಚ್ 4 ರಂದು ಹಠಾತ್ತನೆ ಮುಂದೂಡಿತ್ತು. ಈಗ ದಿನಾಂಕ ಮರು ನಿಗದಿಯಾಗಿದ್ದು, ಜೂನ್ 1 ರಿಂದ ಜೂನ್ 20 ರವರೆಗೆ ಈ ಟೂರ್ನಿ ನಡೆಯಲಿದೆ. ಪಂದ್ಯಾವಳಿಯ ಮರುನಿಗದಿಪಡಿಸಿದ ಉಳಿದ ಪಂದ್ಯಗಳನ್ನು ಕರಾಚಿಯಿಂದ ಯುಎಇಗೆ ಸ್ಥಳಾಂತರಿಸುವಂತೆ ಎಲ್ಲಾ ಆರು ತಂಡಗಳ ಪ್ರಾಂಚೈಸಿಗಳು ಬರೆದಿದ್ದ ಪತ್ರವನ್ನು ಕಳೆದ ವಾರ ಮಂಡಳಿಗೆ ಕಳುಹಿಸಲಾಗಿದೆ.