ಕರ್ನಾಟಕ

karnataka

ETV Bharat / sports

IPL ಮೆಗಾ ಹರಾಜಿನ ಮೇಲೆ ಕಣ್ಣು: ಭರ್ಜರಿ ಶತಕ ಸಿಡಿಸಿ ಸಾಮರ್ಥ್ಯ ಸಾಭೀತುಪಡಿಸಿದ ರಾಯ್​ - ಜೇಸನ್ ರಾಯ್​ ಸ್ಫೋಟಕ ಬ್ಯಾಟಿಂಗ್

ಐಪಿಎಲ್​ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಇರಾದೆ ಇಟ್ಟುಕೊಂಡಿರುವ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಜೇಸನ್ ರಾಯ್​, ಪಾಕ್​ ಸೂಪರ್ ಲೀಗ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

jason roy century
jason roy century

By

Published : Feb 8, 2022, 6:03 AM IST

ಕರಾಚಿ(ಪಾಕಿಸ್ತಾನ):15ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​​ನ ಮೆಗಾ ಹರಾಜು ಪ್ರಕ್ರಿಯೆ ಬರುವ ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಇದರಲ್ಲಿ 590 ಪ್ಲೇಯರ್ಸ್​ ಭಾಗಿಯಾಗಲಿದ್ದಾರೆ. ಹರಾಜಿಗೆ ಕೇವಲ ಮೂರು ದಿನ ಬಾಕಿ ಇರುವಾಗ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್​ ಜೇಸನ್ ರಾಯ್​ ಎಲ್ಲ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ.

ಪಾಕಿಸ್ತಾನ ಸೂಪರ್​​ ಲೀಗ್​​ 2022ರಲ್ಲಿ ಭರ್ಜರಿ ಶತಕ ಸಿಡಿಸಿರುವ ರಾಯ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಲಾಹೋರ್ ಖಲಂದರ್ಸ್ ವಿರುದ್ಧದ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಜೇಸನ್ ರಾಯ್ ಕೇವಲ 57 ಎಸೆತಗಳಲ್ಲಿ ಬರೋಬ್ಬರಿ 116ರನ್​ಗಳಿಕೆ ಮಾಡಿದ್ದಾರೆ. ಇದರಲ್ಲಿ ಆಕರ್ಷಕ 11 ಬೌಂಡರಿ ಹಾಗೂ 8 ಸಿಕ್ಸರ್ ಸೇರಿಕೊಂಡಿದ್ದವು.

ಮೊದಲು ಬ್ಯಾಟ್​ ಮಾಡಿದ್ದ ಲಾಹೋರ್ ತಂಡ ನಿಗದಿತ 20 ಓವರ್​ಗಳಲ್ಲಿ ಫಖಾರ್​ ಅವರ ಸ್ಫೋಟಕ 70ರನ್​​ ಹೈರಿ ಬ್ರಕ್​​ 41ರನ್​ಗಳ ನೆರವಿನಿಂದ 204ರನ್​ಗಳಿಕೆ ಮಾಡಿತ್ತು. ಇದರ ಬೆನ್ನತ್ತಿದ ಕ್ವೆಟ್ಟಾ ತಂಡ 3 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿದೆ.

ಇದನ್ನೂ ಓದಿರಿ:'ಹರಾಜಿನಲ್ಲಿ ಭಾಗಿಯಾಗಲು ಅನೇಕ ಫ್ರಾಂಚೈಸಿ ನನ್ನನ್ನು ಸಂಪರ್ಕಿಸಿದ್ದವು'... ವಿರಾಟ್​​ ಕೊಹ್ಲಿ!

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈಗಾಗಲೇ ಕಳೆದ ಸಲ ಸನ್​ರೈಸರ್ಸ್ ಹೈದರಾಬಾದ್, ಡೆಲ್ಲಿ ಡೇರ್​ ಡೆವಿಲ್ಸ್ ಹಾಗೂ ಗುಜರಾತ್ ಲಯನ್ಸ್ ಪರ ಕಣಕ್ಕಿಳಿದಿದ್ದು, 13 ಪಂದ್ಯಗಳಿಂದ 329ರನ್​ಗಳಿಕೆ ಮಾಡಿದ್ದಾರೆ.

ABOUT THE AUTHOR

...view details