ದುಬೈ:ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ 2022ರ ಮಹಿಳಾ ಏಕದಿನ ವಿಶ್ವಕಪ್ ವಿಜೇತ ತಂಡದ ಬಹುಮಾನ ಮೊತ್ತವನ್ನು 1.32 ಮಿಲಿಯನ್ ಡಾಲರ್( ಸುಮಾರು 9.9 ಕೋಟಿ ರೂ) ಹಿಂದಿನ 2017ರ ಆವೃತ್ತಿಗಿಂತ ದ್ವಿಗುಣಗೊಳಿಸಿದೆ.
ಕಿವೀಸ್ನ 6 ಸ್ಥಳಗಳಲ್ಲಿ ನಡೆಯಲಿರುವ ಟೂರ್ನಮೆಂಟ್ನ ಒಟ್ಟಾರೆ ಬಹುಮಾನ ಮೊತ್ತವನ್ನು ಕೂಡ ಶೇ.75ರಷ್ಟನ್ನು ಹೆಚ್ಚಿಸಿದೆ. ಐಸಿಸಿ ಪ್ರಕಾರ 8 ತಂಡಗಳು ಒಟ್ಟು 3.5 (ಸುಮಾರು 24 ಕೋಟಿ) ಮಿಲಿಯನ್ ಡಾಲರ್ ಮೊತ್ತವನ್ನು ಹಂಚಿಕೊಳ್ಳಲಿದೆ. 2017ರ ರನ್ನರ್ ಅಪ್ ಭಾರತ ತಂಡ 2.7 ಮಿಲಿಯರ್ ಯುಎಸ್ ಡಾಲರ್(ಸುಮಾರು 2 ಕೋಟಿರೂ) ಪಡೆದುಕೊಂಡಿತ್ತು. ಆದರೆ, ಬಾರಿ ರನ್ನರ್ ಅಪ್ ತಂಡ 6 ಲಕ್ಷ ಡಾಲರ್(ಸುಮಾರು 4.5 ಕೋಟಿ ರೂ) ಪಡೆದುಕೊಳ್ಳಲಿದೆ.
ಸೆಮಿಫೈನಲ್ ಸೋಲು ಕಾಣುವ ಎರಡು ತಂಡಗಳು 3,00,000 USD(ಸುಮಾರು 2.25 ಕೋಟಿ ರೂ) ಪಡೆದುಕೊಂಡರೆ, ನಾಕೌಟ್ ಪ್ರವೇಶಿಸಲು ವಿಫಲವಾಗುವ 4 ತಂಡಗಳೂ ತಲಾ 70,000 USD(ಸುಮಾರು 52 ಲಕ್ಷ ರೂ) ಪಡೆದುಕೊಳ್ಳಲಿವೆ. ಕಳೆದ ಬಾರಿ ಗುಂಪು ಹಂತದ ತಂಡಗಳು ತಲಾ 30,000 USD ಪಡೆದುಕೊಂಡಿದ್ದವು.