ಲಂಡನ್ :ಬದಲಿ ಆಟಗಾರರಾಗಿ ಇಂಗ್ಲೆಂಡ್ಗೆ ಪ್ರಯಾಣಿಸಿದ್ದ ಭಾರತದ ಯುವ ಆಟಗಾರ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಶನಿವಾರ ಲಾರ್ಡ್ಸ್ ಮೈದಾನದಲ್ಲಿ 2ನೇ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ ತಂಡ ಸೇರಿದ್ದಾರೆ.
ಶ್ರೀಲಂಕಾ ವಿರುದ್ಧದ ಸೀಮಿತ ಓವರ್ಗಳ ಸರಣಿಯ ಮುಗಿದ ನಂತರ ಆಗಸ್ಟ್ 3ರಂದು ಇಂಗ್ಲೆಂಡ್ ತಲುಪಿದ್ದರು. ನಂತರ 10 ದಿನಗಳ ಕ್ವಾರಂಟೈನ್ಗೆ ಒಳಗಾಗಿದ್ದರು. ಇದೀಗ ಕ್ವಾರಂಟೈನ್ ಮುಗಿಸಿದ್ದು, ಭಾರತ ತಂಡವನ್ನು ಸೇರಿದ್ದಾರೆ. ಇವರಿಬ್ಬರು 3ನೇ ಟೆಸ್ಟ್ ಪಂದ್ಯದ ಆಯ್ಕೆಗೆ ಲಭ್ಯರಾಗಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್, ನಿಮಗೆ ಲಾರ್ಡ್ಸ್ಗೆ ಸ್ವಾಗತ ಎಂದು ಇಬ್ಬರ ಫೋಟೊವನ್ನು ಶೇರ್ ಮಾಡಿಕೊಂಡಿದೆ.
ಶುಬ್ಮನ್ ಗಿಲ್ ಗಾಯಗೊಂಡು ಭಾರತಕ್ಕೆ ಹಿಂತಿರುಗಿದ್ದು, ಅವರ ಬದಲಿಗೆ ಪೃಥ್ವಿ ಶಾರನ್ನು ಹೆಚ್ಚುವರಿ ಆರಂಭಿಕನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನು, ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಆವೇಶ್ ಖಾನ್ ಕೂಡ ಗಾಯದಿಂದ ಹೊರ ಬಿದ್ದಿದ್ದರಿಂದ ಸೂರ್ಯಕುಮಾರ್ ಯಾದವ್ಗೆ ಟೀಂ ಮ್ಯಾನೇಜ್ಮೆಂಟ್ ಕರೆ ನೀಡಿತ್ತು.
ನಾಟಿಂಗ್ಹ್ಯಾಮ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇದೀಗ ಲಾರ್ಡ್ಸ್ನಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 364 ರನ್ಗಳಿಸಿದೆ. ಇದಕ್ಕುತ್ತರವಾಗಿ 341 ರನ್ಗಳಿಸಿ 3ನೇ ದಿನ ಬ್ಯಾಟಿಂಗ್ ನಡೆಸುತ್ತಿದೆ. ರೂಟ್ 151 ರನ್ಗಳಿಸಿದ್ದರೆ. ಮೊಯೀನ್ ಅಲಿ 28 ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಇದನ್ನು ಓದಿ:ಟೆಸ್ಟ್ನಲ್ಲಿ ಜೋ ರೂಟ್ 9000 ರನ್.. ಈ ಸಾಧನೆ ಮಾಡಿದ 2ನೇ ಇಂಗ್ಲಿಷ್ ದಾಂಡಿಗ..