ಮುಂಬೈ: ಭಾರತದ ಭವಿಷ್ಯದ ಕ್ರಿಕೆಟಿಗ ಪೃಥ್ವಿ ಶಾ 15ನೇ ಆವೃತ್ತಿಯನ್ನು ಸ್ವಲ್ಪ ಶಾಂತವಾಗಿಯೇ ಆರಂಭಿಸಿದರೂ, ನಂತರ ಸತತ ಅರ್ಧಶತಕ ಸಿಡಿಸುವ ಮೂಲಕ ತಮ್ಮ ನೈಜ ಆಟಕ್ಕೆ ಮರಳಿದ್ದರು. ಮತ್ತೆ ಆರ್ಸಿಬಿ ವಿರುದ್ಧ ಮಂಕಾದರೂ ಬುಧವಾರ ನಡೆದ ಪಂಜಾಬ್ ವಿರುದ್ಧ ಕೇವಲ 20 ಎಸೆತಗಳಲ್ಲಿ 41 ರನ್ ಸಿಡಿಸಿ 116 ರನ್ಗಳ ಗುರಿಯನ್ನು ಕೇವಲ 10.3 ಓವರ್ಗಳಲ್ಲಿ ತಲುಪಲು ನೆರವಾಗಿದ್ದರು.
ಶಾ ಕಳೆದ ಆವೃತ್ತಿಯಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಂಬಿಕಸ್ಥ ಬ್ಯಾಟರ್ ಆಗಿದ್ದು, ತನ್ನ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ಕ್ಯಾಪಿಟಲ್ಸ್ಗೆ ಭರ್ಜರಿ ಆರಂಭ ಒದಗಿಸಿಕೊಡುತ್ತಿದ್ದಾರೆ. ಈ ವೇಳೆ ಕೆಲವೊಂದು ಪಂದ್ಯದಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವ ಅವಕಾಶವಿದ್ದರೂ ತಮ್ಮ ಆಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ಅವರನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಭೀತಿಯಿಲ್ಲದೆ ಸ್ವಾರ್ಥವಿಲ್ಲದೆ ಆಡುವ ಪೃಥ್ವಿ ಆಟ ಅಮೂಲ್ಯವಾದ ಕ್ರಿಕೆಟಿಗನನ್ನಾಗಿ ಮಾಡಿದೆ ಎಂದಿದ್ದಾರೆ.