ಕರ್ನಾಟಕ

karnataka

ETV Bharat / sports

WD, 4,4,4,4,4,4: ಒಂದೇ ಓವರ್​ನಲ್ಲಿ 6 ಫೋರ್​ ಬಾರಿಸಿ ದಾಖಲೆ ಬರೆದ ಪೃಥ್ವಿ ಶಾ - Shivam Mavi

ಕಳೆದ ಪಂದ್ಯದಲ್ಲಿ 4 ಓವರ್​ಗಳಲ್ಲಿ ಕೇವಲ 15 ರನ್​ ನೀಡಿದ್ದ ತಮ್ಮ ನಾಯಕತ್ವದಲ್ಲಿ ಆಡಿದ್ದ ವೇಗಿ ಶಿವಂ ಮಾವಿ ಓವರ್​ನಲ್ಲಿ ಶಾ 6ಕ್ಕೆ6 ಫೋರ್​ ಬಾರಿಸಿದರು. ಒಂದು ವೈಡ್ ಸೇರಿದಂತೆ ಈ ಓವರ್​ನಲ್ಲಿ ಒಟ್ಟು 25 ರನ್​ ಬಂದಿತು.

ಫೃಥ್ವಿ ಶಾ ಐಪಿಎಲ್ ದಾಖಲೆ
ಫೃಥ್ವಿ ಶಾ ಐಪಿಎಲ್ ದಾಖಲೆ

By

Published : Apr 29, 2021, 9:52 PM IST

Updated : Apr 29, 2021, 11:37 PM IST

ಅಹ್ಮದಾಬಾದ್​: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಪೃಥ್ವಿ ಶಾ ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್​ನಲ್ಲಿ 6 ಬೌಂಡರಿ(ಫೋರ್) ಬಾರಿಸಿದ ಎರಡನೇ ಬ್ಯಾಟ್ಸ್​ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 2012 ರಲ್ಲಿ ಅಜಿಂಕ್ಯ ರಹಾನೆ ಆರ್ಸಿಬಿ ಬೌಲರ್ ಎಸ.ಅರವಿಂದ್ ಅವರಿಗೆ ಒಂದೇ ಓವರ್‌ನಲ್ಲಿ 6 ಬೌಂಡರಿ ಬಾರಿಸಿದ್ದರು‌.

ಕೆಕೆಆರ್​ ವಿರುದ್ಧ ಅಹ್ಮದಾಬಾದ್​ನಲ್ಲಿ ನಡೆಯುತ್ತಿರುವ ಐಪಿಎಲ್​ನ 25 ನೇ ಪಂದ್ಯದಲ್ಲಿ ಪೃಥ್ವಿ ಶಾ ಡೆಲ್ಲಿ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲೀ ಈ ಸಾಧನೆ ಮಾಡಿದ್ದಾರೆ,

ಕಳೆದ ಪಂದ್ಯದಲ್ಲಿ 4 ಓವರ್​ಗಳಲ್ಲಿ ಕೇವಲ 15 ರನ್​ ನೀಡಿದ್ದ ತಮ್ಮ ನಾಯಕತ್ವದಲ್ಲಿ ಆಡಿದ್ದ ವೇಗಿ ಶಿವಂ ಮಾವಿ ಓವರ್​ನಲ್ಲಿ ಶಾ 6ಕ್ಕೆ6 ಫೋರ್​ ಬಾರಿಸಿದರು. ಒಂದು ವೈಡ್ ಸೇರಿದಂತೆ ಈ ಓವರ್​ನಲ್ಲಿ ಒಟ್ಟು 25 ರನ್​ ಬಂದಿತು.

ಮೊದಲ ಓವರ್​ನಲ್ಲಿ ಅಧಿಕ ರನ್ ದಾಖಲೆ

ಒಂದೇ ಓವರ್​ನಲ್ಲಿ 6 ಬೌಂಡರಿ ಬಾರಿಸಿದ ದಾಖಲೆ ಜೊತೆಗೆ ಆರಂಭಿಕ ಓವರ್​ನಲ್ಲಿ ಗರಿಷ್ಠ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಶಾ ತಮ್ಮ ಹೆಸರಿಗೆ ಬರೆದುಕೊಂಡರು. ಶಾ 25 ರನ್​ ಬಾರಿಸಿದರೆ, ನಮನ್ ಓಜಾ 2009ರಲ್ಲಿ ಮತ್ತು 2018ರಲ್ಲಿ ನರೈನ್ 21 ರನ್​ ಬಾರಿಸಿದ್ದದ್ದು ಈವರೆಗಿನ ದಾಖಲೆಯಾಗಿತ್ತು. ಗಿಲ್​ಕ್ರಿಸ್ಟ್ ಒಮ್ಮೆ ಮತ್ತು​ , ಕ್ರಿಸ್ ಗೇಲ್ ಎರಡು ಬಾರಿ ತಲಾ 20 ರನ್​ ಬಾರಿಸಿದ್ದಾರೆ.

ಇದನ್ನು ಓದಿ: 'ಮಿಷನ್​ ಆಕ್ಸಿಜನ್​​': ಕೋವಿಡ್​ ವಿರುದ್ಧ ಹೋರಾಟಕ್ಕೆ 1 ಕೋಟಿ ರೂ.ದೇಣಿಗೆ ನೀಡಿದ ಸಚಿನ್​

Last Updated : Apr 29, 2021, 11:37 PM IST

ABOUT THE AUTHOR

...view details