ನವದೆಹಲಿ: ನ್ಯೂಜಿಲ್ಯಾಂಡ್ ವಿರುದ್ಧ ಇಂಗ್ಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ಸರಣಿಗೆ ಶುಕ್ರವಾರ ಭಾರತ ತಂಡವನ್ನು ಪ್ರಕಟಿಸಿದೆ. ಇದರಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಪೃಥ್ವಿ ಶಾಗೆ ಕೊಕ್ ನೀಡಲಾಗಿದೆ.
ವಿಜಯ್ ಹಜಾರೆಯಲ್ಲಿ 800+ ರನ್ ಮತ್ತು ಐಪಿಎಲ್ ಕೂಡ ಅದ್ಭುತ ಪ್ರದರ್ಶನ ತೋರಿದ್ದರು. ಆದರೆ, ಟೆಸ್ಟ್ ತಂಡಕ್ಕೆ ಪ್ರಕಟಿಸಿದ 20 ಸದಸ್ಯರ ತಂಡದಲ್ಲಿ ಮಾತ್ರ ಅವರನ್ನು ಕಡೆಗಣಿಸಲಾಗಿದೆ. ಅಲ್ಲದೇ ಹೆಚ್ಚುವರಿ ಆಟಗಾರರ ಪಟ್ಟಿಯಲ್ಲೂ ಅವಕಾಶ ನೀಡಿಲ್ಲದಿರುವುದು ಅಚ್ಚರಿಯ ವಿಚಾರವಾಗಿದೆ.
" 21 ವರ್ಷದ ಪೃಥ್ವಿ ಮೈದಾನದಲ್ಲಿ ತುಂಬಾ ನಿಧಾನವಾಗಿ ಓಡಾಡುತ್ತಾರೆ. ಅವರು ಒಂದಷ್ಟು ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಆಸ್ಟ್ರೇಲಿಯಾದಲ್ಲಿ ಫೀಲ್ಡಿಂಗ್ ಮಾಡುವಾಗ ಏಕಾಗ್ರತೆ ಕೊರತೆ ಅನುಭವಿಸಿದ್ದರು. ಶಾ ಅವರು ಆಸ್ಟ್ರೇಲಿಯಾದಿಂದ ಹಿಂದಿರುಗಿದಾಗಿನಿಂದಲೂ ಶ್ರಮಿಸುತ್ತಿದ್ದಾರೆ. ಅವರು ರಿಷಭ್ ಪಂತ್ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಕೆಲವು ತಿಂಗಳ ಹಿಂದೆ ಪಂತ್ ಕಮ್ಬ್ಯಾಕ್ ಮಾಡಿದ್ದಾರೆ, ಇದೀಗ ಪೃಥ್ವಿ ಕೂಡ ಮಾಡಬಹುದು" ಎಂದು ಬಿಸಿಸಿಐ ಮೂಲ ತಿಳಿಸಿದೆ.
ಆಟಗಾರರು ಈ ರೀತಿಯ ಸಲಹೆ ಪಡೆಯುತ್ತಿರುವುದು ಇದೇ ಮೊದಲೇನಲ್ಲ, ಕೆಲವು ತಿಂಗಳ ಹಿಂದೆ ರಿಷಭ್ ಪಂತ್ ಕೂಡ ಇದೇ ಸಮಸ್ಯೆಯಿಂದ ಟೀಕೆಗೆ ಗುರಿಯಾಗಿದ್ದರು. ನಂತರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಾಕಷ್ಟು ಶ್ರಮಿಸಿದ್ದರು. ಎಲ್ಲ ಮಾದರಿಯ ಕ್ರಿಕೆಟ್ನಿಂದ ಡ್ರಾಪ್ ಆಗುವ ಹಂತಕ್ಕೆ ತಲುಪಿದ್ದ ಪಂತ್, ಅದ್ಭುತವಾಗಿ ತಿರುಗಿಬಿದ್ದು, ಇದೀಗ ಮೂರು ಮಾದರಿಯ ಕ್ರಿಕೆಟ್ನಲ್ಲಿ ಪ್ರಧಾನ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಮಿಂಚುತ್ತಿದ್ದಾರೆ. ಪೃಥ್ವಿ ಖಂಡಿತಾ ಪಂತ್ ಹಾದಿಯನ್ನು ಅನುಸರಿಸಿದರೆ ಭವಿಷ್ಯದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: 20 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ, ಯಾರಿಗೆಲ್ಲ ಚಾನ್ಸ್?