ಕರ್ನಾಟಕ

karnataka

ETV Bharat / sports

ರಾಹುಲ್​ ಕಮ್​ಬ್ಯಾಕ್ : ವಿಂಡೀಸ್​ ವಿರುದ್ಧ 2ನೇ ಏಕದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವತ್ತ ಭಾರತ ಚಿತ್ತ - ಅಹ್ಮದಾಬಾದ್​ ಭಾರತ ವಿಂಡೀಸ್ ಏಕದಿನ ಪಂದ್ಯ

ಮೊದಲ ಪಂದ್ಯದಲ್ಲಿ ಭಾರತೀಯ ಸ್ಪಿನ್​ದ್ವಯರಾದ ಯುಜ್ವೇಂದ್ರ ಚಹಲ್​ ಮತ್ತು ವಾಷಿಂಗ್ಟನ್​ ಸುಂದರ್​ ವಿಂಡೀಸ್​ ತಂಡವನ್ನು ಕೇವಲ 176ಕ್ಕೆ ಆಲೌಟ್​ ಮಾಡುವಲ್ಲಿ ಯಶಸ್ವಿಯಾದರೆ, ನಾಯಕ ರೋಹಿತ್ ಶರ್ಮಾ ಸ್ಫೋಟಕ 60 ರನ್​ಗಳ ನೆರವಿನಿಂದ 6 ವಿಕೆಟ್​ಗಳ ರೋಚಕ ಜಯ ಸಾಧಿಸಿ ಭಾರತಕ್ಕೆ 1-0ಯಲ್ಲಿ ಸರಣಿ ಮುನ್ನುಡೆ ತಂದುಕೊಟ್ಟಿದ್ದರು..

Rahul's batting position in focus as buoyant India look to seal series against Windies
ವಿಂಡೀಸ್​ ವಿರುದ್ಧ 2ನೇ ಏಕದಿನ ಪಂದ್ಯ ಗೆದ್ದು ಸರಣಿ ವಶ ಪಡಿಸಿಕೊಳ್ಳುತ್ತ ಭಾರತ ಚಿತ್ತ

By

Published : Feb 8, 2022, 9:23 PM IST

ಅಹ್ಮದಾಬಾದ್ ​:ವೆಸ್ಟ್​ ಇಂಡೀಸ್​ ವಿರುದ್ಧ ಬುಧವಾರ 2ನೇ ಏಕದಿನ ಪಂದ್ಯ ನಡೆಯಲಿದೆ. ಭಾರತ ತಂಡ ತನ್ನ ಪ್ರಾಬಲ್ಯಯುತ ಪ್ರದರ್ಶನವನ್ನು ಮುಂದುವರಿಸಿ ಸರಣಿ ವಶಪಡಿಸಿಕೊಳ್ಳುವತ್ತ ಗಮನ ಹರಿಸಿದೆ.

ಮೊದಲ ಪಂದ್ಯದಲ್ಲಿ ಭಾರತೀಯ ಸ್ಪಿನ್​ದ್ವಯರಾದ ಯಜ್ವೇಂದ್ರ ಚಹಲ್​ ಮತ್ತು ವಾಷಿಂಗ್ಟನ್​ ಸುಂದರ್​ ವಿಂಡೀಸ್​ ತಂಡವನ್ನು ಕೇವಲ 176ಕ್ಕೆ ಆಲೌಟ್​ ಮಾಡುವಲ್ಲಿ ಯಶಸ್ವಿಯಾದರೆ, ನಾಯಕ ರೋಹಿತ್ ಶರ್ಮಾ ಸ್ಫೋಟಕ 60 ರನ್​ಗಳ ನೆರವಿನಿಂದ 6 ವಿಕೆಟ್​ಗಳ ರೋಚಕ ಜಯ ಸಾಧಿಸಿ ಭಾರತಕ್ಕೆ 1-0ಯಲ್ಲಿ ಸರಣಿ ಮುನ್ನಡೆ ತಂದುಕೊಟ್ಟಿದ್ದರು.

ದಕ್ಷಿಣ ಆಫ್ರಿಕಾ ನೆಲದಲ್ಲಿ ವೈಟ್​ವಾಷ್​ ಮುಖಭಂಗಕ್ಕೆ ಒಳಗಾಗಿರುವ. ಆದರೆ, ಆ ಸರಣಿಯನ್ನು ಮಿಸ್​ ಮಾಡಿಕೊಂಡಿದ್ದ ರೋಹಿತ್ ಶರ್ಮಾ ಇದೀಗ ಕಮ್​ಬ್ಯಾಕ್ ಮಾಡಿದ್ದು, ನಾಯಕನಾಗಿ ಭಾರತ ತಂಡ ಹೊಸ ಹುರುಪಿನೊಂದಿಗೆ ಮುನ್ನಡೆಸುತ್ತಿದ್ದಾರೆ.

ರಾಹುಲ್​ ಕಮ್​ಬ್ಯಾಕ್​ :ಮೊದಲ ಪಂದ್ಯದ ವೇಳೆ ವಿಶ್ರಾಂತಿಯಲ್ಲಿದ್ದ ಉಪನಾಯಕ ಕೆ ಎಲ್ ರಾಹುಲ್, 2ನೇ ಪಂದ್ಯಕ್ಕೆ ಲಭ್ಯರಿರಲಿದ್ದಾರೆ. ಆದರೆ, ಅವರು ಆರಂಭಿಕರಾಗಿ ಕಣಕ್ಕಿಳಿಯುತ್ತಾರೋ ಅಥವಾ ಎಂದಿನಂತೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೋ ಎನ್ನುವುದು ಇನ್ನೂ ಖಚಿತವಾಗಿಲ್ಲ.

ಒಂದು ವೇಳೆ ಅವರು ಆರಂಭಿಕನಾಗಿ ಕಣಕ್ಕಿಳಿದರೆ ಜಾರ್ಖಂಡ್ ಬ್ಯಾಟರ್​ ಇಶಾನ್ ಕಿಶನ್​ ತಂಡದಿಂದ ಹೊರ ಬೀಳಬೇಕಾಗುತ್ತದೆ. ಅಥವಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದರೆ, ಆಲ್​ರೌಂಡರ್​ ದೀಪಕ್​ ಹೂಡಾ ಜಾಗ ಬಿಟ್ಟು ಕೊಡಬೇಕಾಗುತ್ತದೆ. ರಾಹುಲ್​ ಆಡುವುದು ಖಚಿತ. ಆದ್ರೆ, ಅವರಿಗೆ ಜಾಗ ಯಾರು ಬಿಡುತ್ತಾರೆ ಎನ್ನುವುದೇ ಕುತೂಹಲಕಾರಿ ಸಂಗತಿಯಾಗಿದೆ.

ಬೌಲಿಂಗ್ ವಿಭಾಗದಲ್ಲಿ ಬದಲಾವಣೆಯಿಲ್ಲ:ಬ್ಯಾಟಿಂಗ್ ವಿಭಾಗದಲ್ಲಿ ಒಂದೆರಡು ಬದಲಾವಣೆಯಾದರೂ ಆಗಬಹುದು. ಆದರೆ, ಬೌಲಿಂಗ್​ನಲ್ಲಿ ಬದಲಾವಣೆ ಅಸಾಧ್ಯ. ಏಕೆಂದರೆ, ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್​ಗಳ ದಂಡೇ ಹೊಂದಿರುವ ವಿಂಡೀಸ್​ ತಂಡವನ್ನು 176ಕ್ಕೆ ಆಲೌಟ್​ ಮಾಡುವಲ್ಲಿ ಯಶಸ್ವಿಯಾಗಿತ್ತು. ಒಂದು ವೇಳೆ ಬದಲಾವಣೆ ಮಾಡಬೇಕೆಂದರೆ ಒಬ್ಬ ವೇಗಿಯ ಬದಲಿ ಅವಕಾಶಕ್ಕಾಗಿ ಕಾಯುತ್ತಿರುವ ಚೈನಾಮೆನ್​ ಕುಲ್ದೀಪ್​ಗೆ ಅವಕಾಶ ಕೊಡಬಹುದು. ಆದರೆ, ಸಾಧ್ಯತೆ ಕಡಿಮೆಯಿದೆ.

ಇದನ್ನೂ ಓದಿ:ಮ್ಯಾನೇಜ್​ಮೆಂಟ್​ ಬಯಸಿದರೆ ಬೌಲಿಂಗ್ ಮಾಡಲು ಸಿದ್ಧ: ಸೂರ್ಯಕುಮಾರ್ ಯಾದವ್​

ಇತ್ತ ಕಳೆದ 16 ಪಂದ್ಯಗಳಲ್ಲಿ 10ರಲ್ಲಿ 50 ಓವರ್​ ಪೂರ್ಣಗೊಳಿಸುವಲ್ಲಿ ವಿಫಲರಾಗಿರುವ ವೆಸ್ಟ್​ ಇಂಡೀಸ್​ ತಮ್ಮ ಬ್ಯಾಟಿಂಗ್​ ವಿಭಾಗವನ್ನು ಸುಧಾರಿಸಿಕೊಳ್ಳುವುದರತ್ತ ಗಮನ ಹರಿಸಿದೆ. ಕಳೆದ ಪಂದ್ಯದಲ್ಲಿ ನಾಯಕ ಪೊಲಾರ್ಡ್ ಸೇರಿದಂತೆ ಬ್ಯಾಟರ್​ಗಳು ಭಾರತೀಯ ಬೌಲಿಂಗ್ ದಾಳಿಗೆ ಉತ್ತರಿಸಲಾಗದೆ ಕುಸಿತ ಕಂಡಿತ್ತು. ಜೇಸನ್​ ಹೋಲ್ಡರ್​ ಮಾತ್ರ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದರು. 2ನೇ ಪಂದ್ಯದಲ್ಲಿ ಅವರ ಜೊತೆಗೆ ಇತರೆ ಬ್ಯಾಟರ್​ಗಳು ಕೈಜೋಡಿಸಿದರೆ, ಬಲಿಷ್ಠ ಭಾರತ ತಂಡಕ್ಕೆ ತಕ್ಕಮಟ್ಟಿಗಾದರೂ ಪೈಪೋಟಿ ನೀಡಬಹುದಾಗಿದೆ.

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್-ಕೀಪರ್), ದೀಪಕ್ ಹೂಡಾ , ರಿಷಬ್ ಪಂತ್ (ವಿಕೆಟ್-ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಶಾರುಖ್ ಖಾನ್.

ವೆಸ್ಟ್ ಇಂಡೀಸ್ :ಕೀರಾನ್ ಪೊಲಾರ್ಡ್ (ನಾಯಕ), ಫ್ಯಾಬಿಯನ್ ಅಲೆನ್, ಎನ್​ಕ್ರುಮಾ ಬೊನ್ನರ್, ಡ್ಯಾರೆನ್ ಬ್ರಾವೋ, ಶಮರ್ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್, ಕೆಮರ್ ರೋಚ್, ರೊಮಾರಿಯೊ ಶೆಪರ್ಡ್, ಒಡೆನ್ ಸ್ಮಿತ್, ಹೇಡನ್ ವಾಲ್ಶ್​ ಜೂ.

ABOUT THE AUTHOR

...view details