ಆಕ್ಲೆಂಡ್ :ಈವರೆಗೆ ಮಹಿಳಾ ವಿಶ್ವಕಪ್‌ನಲ್ಲಿ ಸೋಲು ಮತ್ತು ಗೆಲುವು ಎರಡನ್ನೂ ಕಂಡಿರುವ ಭಾರತೀಯ ವನಿತೆಯರ ತಂಡ, ಶನಿವಾರ ಬಲಿಷ್ಟ ಆಸ್ಟ್ರೇಲಿಯನ್ನರ ವಿರುದ್ಧ ಸೆಣಸಲಿದೆ. ಸೆಮಿಫೈನಲ್ ಪ್ರವೇಶಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದರಿಂದ, ಮಿಥಾಲಿ ರಾಜ್ ಪಡೆಗೆ ಕಠಿಣ ಸವಾಲಾಗಿದೆ. ಗೆಲುವಿನ ಲಯಕ್ಕೆ ತರುವ ಜವಾಬ್ದಾರಿ ಹೊತ್ತಿಕೊಂಡಿರುವ ಅವರು, ಕೆಲವು ತಂತ್ರಗಾರಿಕೆ ಹೆಣೆಯುವುದು ಅನಿವಾರ್ಯವಾಗಿದೆ.
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಲಯ ಕಳೆದುಕೊಂಡಿದ್ದ ಮಿಥಾಲಿ ರಾಜ್ ಪಡೆಯ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದೆ. ಅದಕ್ಕೂ ಮುನ್ನ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತಂಡ ಗೆದ್ದು ಬೀಗಿತ್ತು. ಈವರೆಗೆ ಎರಡು ಪಂದ್ಯ ಸೋತರೆ, ಎರಡು ಗೆಲುವು ತನ್ನದಾಗಿಸಿಕೊಂಡಿದೆ. ಹಾಗಾಗಿ, ಭಾರತ ತಂಡಕ್ಕೆ ನಾಳೆ ನಡೆಯಲಿರುವ ಪಂದ್ಯವು ಬಹಳ ಮಹತ್ವದ್ದಾಗಿದೆ.
ಭಾರತ ಸೆಮಿಫೈನಲ್‌ಗೆ ಪ್ರವೇಶ ಮಾಡಬೇಕೆಂದರೆ ನಾಳೆ ನಡೆಯಲಿರುವ ಪಂದ್ಯವನ್ನು ಗೆಲ್ಲಲೇಬೇಕಾದ ಅನಿಯಾರ್ವಯತೆ ಇದೆ. ಬ್ಯಾಟಿಂಗ್ ಉತ್ತಮ ಪ್ರದರ್ಶನದ ಹೊರಾಗಿಯೂ ನ್ಯೂಜಿಲೆಂಡ್ ವಿರುದ್ಧ ಸೋತಿತು. ಈ ವಿಶ್ವಕಪ್‌ನಲ್ಲಿ ಕಳೆದ ನಾಲ್ಕೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಎದ್ದು ಕಂಡಿದೆ.
ನಾಳೆ ಅದು ಪುನಾರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ನಾಳೆ ನಾವು ಬ್ಯಾಟಿಂಗ್ನಲ್ಲಿ ಪರಿಪೂರ್ಣ ಪ್ರಾಬಲ್ಯ ಸಾಧಿಸುವ ವಿಶ್ವಾಸ ಹೊಂದಿದ್ದೇವೆ. ಬೌಲರ್‌ಗಳು ಸಹ ಹಿಂದೆ ಬೀಳುವ ಮಾತಿಲ್ಲ. ಅವರು ಸಹ ಎದುರಾಳಿ ತಂಡವನ್ನು ಕಟ್ಟಿ ಹಾಕಲಿದ್ದಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ.
ಆಸ್ಟ್ರೇಲಿಯಾ ತಂಡವು ತಾನು ಆಡಿದ ನಾಲ್ಕು ಪಂದ್ಯಗಳಲ್ಲಿ ನಾಲ್ಕು ಗೆದ್ದುಕೊಂಡು ಶ್ರೇಯಾಂಕದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗಾಗಿ, ನಾಳೆ ನಡೆಯಲಿರುವ ಪಂದ್ಯದಲ್ಲಿ ತನ್ನ ಗೆಲುವಿನ ಮುನ್ನೋಟವನ್ನು ಮುಂದುವರೆಸಲಿದೆಯೇ ಅಥವಾ ಈ ಗೆಲುವಿಗೆ ಟೀಂ ಇಂಡಿಯಾ ತಂಡವು ಕಂಟಕವಾಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.