ಕರ್ನಾಟಕ

karnataka

ETV Bharat / sports

14 ಸಾವಿರಕ್ಕೆ ನಿಲ್ಲಲ್ಲ, 15,000 ರನ್ ಸಿಡಿಸುವ​ ಗುರಿ ಹೊಂದಿದ್ದೇನೆ: ಕ್ರಿಸ್‌ ಗೇಲ್ - ಆಸ್ಟ್ರೇಲಿಯಾ ವಿರುದ್ಧ ವೆಸ್ಟ್​ ಇಂಡೀಸ್​ಗೆ ಸರಣಿ ಜಯ

ಕ್ರಿಸ್ ಗೇಲ್​​ ಇಂದು ನಡೆದ ಪಂದ್ಯದಲ್ಲಿ 7 ಸಿಕ್ಸರ್​ ಮತ್ತು 4 ಬೌಂಡರಿ ಸಹಿತ ಕೇವಲ 38 ಎಸೆತಗಳಲ್ಲಿ 67 ರನ್​ ಚಚ್ಚಿದರು. ಇವರ ಬ್ಯಾಟಿಂಗ್ ನೆರವಿನಿಂದ ಆಸೀಸ್ ನೀಡಿದ್ದ 142 ರನ್​ಗಳ ಗುರಿಯನ್ನು ವಿಂಡೀಸ್ ಕೇವಲ 14.5 ಓವರ್​ಗಳಲ್ಲಿ ತಲುಪುವ ಮೂಲಕ 5 ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳಿರುವಂತೆ ಗೆದ್ದುಕೊಂಡಿತು.

ಕ್ರಿಸ್ ಗೇಲ್
ಕ್ರಿಸ್ ಗೇಲ್

By

Published : Jul 13, 2021, 4:12 PM IST

ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ಬ್ಯಾಟ್ಸ್​ಮನ್ ಕ್ರಿಸ್​ ಗೇಲ್ ಟಿ20 ಕ್ರಿಕೆಟ್​ನಲ್ಲಿ 14 ಸಾವಿರ ರನ್​ ಗಡಿದಾಟಿದ ಮೊದಲ ಬ್ಯಾಟ್ಸ್​ಮನ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಸ್ಫೋಟಕ ಬ್ಯಾಟಿಂಗ್​​ನಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲ್ಲಲು ನೆರವಾದ ಗೇಲ್, ತಮ್ಮಲ್ಲಿ ಇಂತಹ ಸಾಕಷ್ಟು ಆಟ ಉಳಿದಿದೆ ಮತ್ತು ಮುಂದೆ ಸಾಕಷ್ಟು ರನ್​ ಹರಿದು ಬರಲಿದೆ ಎಂದು ತಿಳಿಸಿದ್ದಾರೆ.

ಕ್ರಿಸ್ ಗೇಲ್​​ ಇಂದು ನಡೆದ ಪಂದ್ಯದಲ್ಲಿ 7 ಸಿಕ್ಸರ್​ ಮತ್ತು 4 ಬೌಂಡರಿ ಸಹಿತ ಕೇವಲ 38 ಎಸೆತಗಳಲ್ಲಿ 67 ರನ್​ ಚಚ್ಚಿದರು. ಇವರ ಬ್ಯಾಟಿಂಗ್ ನೆರವಿನಿಂದ ಆಸೀಸ್ ನೀಡಿದ್ದ 142 ರನ್​ಗಳ ಗುರಿಯನ್ನು ವಿಂಡೀಸ್ ಕೇವಲ 14.5 ಓವರ್​ಗಳಲ್ಲಿ ತಲುಪುವ ಮೂಲಕ 5 ಪಂದ್ಯಗಳ ಸರಣಿಯನ್ನು ಇನ್ನೂ 2 ಪಂದ್ಯಗಳಿರುವಂತೆ ವಶಪಡಿಸಿಕೊಂಡಿತು. ಗೇಲ್​ ದೇಶದ ಪರ 14ನೇ ಅರ್ಧಶತಕ ಬಾರಿಸಿದ್ದಲ್ಲದೆ, ಒಟ್ಟಾರೆ ಚುಟುಕು ಕ್ರಿಕೆಟ್​ನಲ್ಲಿ 14 ಸಾವಿರ ಮೈಲುಗಲ್ಲು ಸ್ಥಾಪಿಸಿದರು.

"14,000 ರನ್​ಗಳಿಸಿರುವುದು ಒಂದು ಶ್ರೇಷ್ಠ ಸಾಧನೆ. ಇದು ಅದ್ಭುತವಾಗಿದೆ. ನಾನು ಸ್ವತಃ 15 ಸಾವಿರ ರನ್​ ಗಳಿಸುವ ಟಾರ್ಗೆಟ್ ನಿಗದಿಪಡಿಸಿಕೊಂಡಿದ್ದೇನೆ. ಮೊದಲಿಗನಾಗಿ 14 ಸಾವಿರ ರನ್​ಗಳಿಸಿರುವುದಕ್ಕೆ ಸಂತೋಷವಿದೆ. ಅದರಲ್ಲೂ ಗೆಲುವಿನ ಪಂದ್ಯದಲ್ಲಿ ಬಂದಿದ್ದು ಉತ್ತಮವೆನಿಸಿದೆ. ಅರ್ಧಶತಕ ಗಳಿಸಿದ್ದು, ಮತ್ತು ಸರಣಿ ಗೆದ್ದಿರುವುದು ಅದ್ಭುತವಾಗಿದೆ" ಎಂದು ಗೇಲ್ ಹೇಳಿದ್ದಾರೆ.

"ನಾನು ಇನ್ನೂ ಕ್ರಿಕೆಟ್​ನಲ್ಲಿ ಸಮರ್ಥನಾಗಿದ್ದೇನೆ ಎಂದು ಪ್ರದರ್ಶಿಸಲು ಇನ್ನೂ ಹೆಚ್ಚಿನ ರನ್​ಗಳು ಬರಲಿವೆ. ನನ್ನ ಟ್ಯಾಂಕ್​ನಲ್ಲಿ ಸಾಕಷ್ಟು(ಆಟ) ಉಳಿದಿದೆ. ಈ ಪಂದ್ಯದಲ್ಲಿ ಒಂದಷ್ಟು ರನ್​ ಬಂದಿದ್ದು ನನಗೆ ರಿಲೀಫ್ ನೀಡಿದೆ. ಕೆಲವು ಸಮಯದಿಂದ ನಾನು ರನ್​ಗಳಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ನನಗೆ ಈ ದಿನದ ಆಟ ಸಂತೋಷ ತಂದಿದೆ, ಆದರೆ ಇದೆಲ್ಲಾ ನಮ್ಮ ತಂಡದ ಆಟಗಾರರ ಸಹಕಾರ ಮತ್ತು ನಾಯಕ ಪೊಲಾರ್ಡ್​ ನನ್ನ ಹಿಂದೆ ನಿಲ್ಲದಿದ್ದರೆ ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ.

ಇದನ್ನೂ ಓದಿ: ಕ್ರಿಸ್​ ಗೇಲ್​ ಅಬ್ಬರ, ಆಸ್ಟ್ರೇಲಿಯಾ ತತ್ತರ.. ಟಿ20 ಸರಣಿ ಕೈಚೆಲ್ಲಿದ ಫಿಂಚ್​ ಬಳಗ!!

ABOUT THE AUTHOR

...view details