ಅಹ್ಮದಾಬಾದ್ :ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಶ್ರೇಷ್ಠ ಸ್ಪಿನ್ದ್ವಯರಲ್ಲಿ ಒಂದಾಗಿದ್ದ ಯಜ್ವೇಂದ್ರ ಚಹಲ್ ಮತ್ತು ಕುಲ್ದೀಪ್ ಜೋಡಿಯನ್ನು ಕಣಕ್ಕಿಳಿಸಬೇಕೆಂಬುದ ನನ್ನ ಮನಸ್ಸಿನಲ್ಲಿದೆ ಎಂದು ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡ ವಿಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಅಧಿಕೃತ ನಾಯಕನಾಗಿ ರೋಹಿತ್ ಶರ್ಮಾ ಅವರಿಗೆ ಇದು ಮೊದಲ ಸರಣಿಯಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅವರೇ ಮುನ್ನಡೆಸಬೇಕಾಗಿತ್ತಾದರೂ, ಹ್ಯಾಮ್ಸ್ಟ್ರಿಂಗ್ ಕಾರಣ ಪ್ರವಾಸದಿಂದಲೇ ಹೊರಬಿದ್ದಿದ್ದರು. ಹಾಗಾಗಿ, ರಾಹುಲ್ ತಂಡವನ್ನು ಮುನ್ನಡೆಸಿದ್ದರು.
ಹಿಂದೆ ಕುಲ್ದೀಪ್ ಮತ್ತು ಚಹಲ್ ನಮಗಾಗಿ ಶ್ರೇಷ್ಠ ಪ್ರದರ್ಶನ ತೋರಿದವರಾಗಿದ್ದಾರೆ. ಅವರಿಬ್ಬರು ಜೊತೆಯಾಗಿ ಆಡಿದಾಗಲೆಲ್ಲಾ ಆಕರ್ಷಕ ಪ್ರದರ್ಶನ ತೋರಿದ್ದಾರೆ. ಮಧ್ಯಂತರದಲ್ಲಿ ಅವರಿಬ್ಬರು ನಾವು ಹೊಸ ಸಂಯೋಜನೆ ಬಯಸಿದ್ದರಿಂದ ಬೇರ್ಪಟ್ಟಿದ್ದರು.