ಹೈದರಾಬಾದ್ :ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಉಳಿದಿದೆ. ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಟೀಂ ಇಂಡಿಯಾದ ಯಂಗ್ ಫೈರ್ ಎಂದೇ ಖ್ಯಾತರಾಗಿರುವ ರಿಷಭ್ ಪಂತ್‌ಗೆ ಕೋವಿಡ್ ಸೋಂಕು ತಗುಲಿದೆ. ನೆಟ್ ಬೌಲರ್ ದಯಾನಂದ್ ಗರಾನಿಗೂ ಸೋಂಕು ದೃಢಪಟ್ಟಿದೆ. ಇದೇ ಕಾರಣದಿಂದ ಪಂತ್ ಕೌಂಟಿ ಇಲೆವೆನ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡುತ್ತಿಲ್ಲ.
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಎಲ್ಲಾ ಸಮಯದಲ್ಲಿಯೂ ಮಾಸ್ಕ್ ಹಾಕಿಕೊಳ್ಳುವುದು ಅಸಾಧ್ಯ ಎಂದು ಯುವ ಆಟಗಾರನನ್ನು ಸಮರ್ಥಿಸಿಕೊಂಡಿದ್ದಾರೆ. "ಇಂಗ್ಲೆಂಡ್‌ನಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ ಯುರೋ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್ ಹಾಗೂ ವಿಂಬಲ್ಡನ್ ಟೆನಿಸ್ ಟೂರ್ನಿಗಳನ್ನು ನೋಡಿದ್ದೇವೆ.
ಕೋವಿಡ್-19 ನಿಯಮಾವಳಿ ಬದಲಾವಣೆಯಾಗಿ ವೀಕ್ಷಕರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಅಂದಹಾಗೆ ನಮ್ಮ ತಂಡದ ಆಟಗಾರರು ರಜೆಯಲ್ಲಿದ್ದಾರೆ. ಹಾಗಾಗಿ, ಎಲ್ಲಾ ಸಮಯದಲ್ಲಿಯೂ ಮಾಸ್ಕ್ ಹಾಕಿಕೊಳ್ಳುವುದು ಸಾಧ್ಯವಿಲ್ಲ," ಎಂದು ಹೇಳಿದರು.