ಕರ್ನಾಟಕ

karnataka

ETV Bharat / sports

ರಸೆಲ್​ ವಿರುದ್ಧ ಸ್ಪಿನ್ನರ್ಸ್​ ಕಣಕ್ಕಿಳಿಸದಿರಲು ನಿರ್ಧರಿಸಿದ್ದೆವು: ಯಾದವ್​ - ಕೆಕೆಆರ್​ ವರ್ಸಸ್ ಡೆಲ್ಲಿ ಕ್ಯಾಪಿಟಲ್ಸ್​

ಡೆಲ್ಲಿ ತಂಡದಲ್ಲಿ ಆಲ್​ರೌಂಡರ್​ ಪ್ರದರ್ಶನ ನೀಡುತ್ತಿರುವ ಲಲಿತ್ ಯಾದವ್​ ನಿನ್ನೆಯ ಪಂದ್ಯದ ಬಳಿಕ ಮಾತನಾಡಿದ್ದು, ಅವರು ರಸೆಲ್ ವಿರುದ್ಧ ಯಾವ ರೀತಿ ಯೋಜನೆ ರೂಪಿಸಿದ್ದರು ಎಂಬ ಗೇಮ್​ ಪ್ಲಾನ್​ ಬಿಚ್ಚಿಟ್ಟಿದ್ದಾರೆ.

Lalit Yadav
Lalit Yadav

By

Published : Apr 30, 2021, 4:13 PM IST

ಅಹಮದಾಬಾದ್​:ಇಂಡಿಯನ್​ ಪ್ರೀಮಿಯರ್ ಲೀಗ್​ನ ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್​​ ತಂಡ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ನಿನ್ನೆಯ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ಟಾಪ್​ ಆರ್ಡರ್​ ಪ್ಲೇಯರ್ಸ್​​ ವೈಫಲ್ಯ ಅನುಭವಿಸುತ್ತಿದ್ದಂತೆ ಕಣಕ್ಕಿಳಿದ ರಸೆಲ್​ ಕೇವಲ 27 ಎಸೆತಗಳಲ್ಲಿ 4 ಸಿಕ್ಸರ್​ 2 ಬೌಂಡರಿ ಸೇರಿ 45 ರನ್ ​ಗಳಿಕೆ ಮಾಡಿದ್ದರು. ಇವರ ವಿರುದ್ಧ ಯಾವುದೇ ಕಾರಣಕ್ಕೂ ಸ್ಪಿನ್ನರ್ಸ್​ ಕಣಕ್ಕಿಳಿಸದಿರುವ ನಿರ್ಧರಿಸಿದ್ದೇವು ಎಂದು ಆಲ್​ರೌಂಡರ್​​ ಲಲಿತ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: 'ಉದಾರತೆ' ಮೆರೆದ ಪೂರನ್​: ಕೋವಿಡ್ ಹೋರಾಟಕ್ಕೆ IPL ಸಂಬಳದ ಇಷ್ಟೊಂದು ಹಣ ದೇಣಿಗೆ

ಆಂಡ್ರೆ ರಸೆಲ್​ ಎದುರು ಸ್ಪಿನ್ನರ್ಸ್​​ಗಳನ್ನ ಕಣಕ್ಕಿಳಿಸದಂತೆ ಯೋಜನೆ ರೂಪಿಸಿದ್ದೆವು. ಹೀಗಾಗಿ ಇಶಾಂತ್​ ಶರ್ಮಾ, ರಬಡಾ ಹಾಗೂ ಆವೇಶ್​ ಖಾನ್​ಗೆ ಬೌಲ್​ ನೀಡಿದ್ದೇವು. ಬೌನ್ಸರ್ ಹಾಗೂ ಯಾರ್ಕರ್​​ ಎಸೆಯುವ ಯೋಜನೆ ಮೂಲಕ ಆರಂಭದಲ್ಲಿ ಅವರ ಮೇಲೆ ನಿಯಂತ್ರಣ ಹೇರಲಾಯಿತು ಎಂದರು.

ಇದು ನನಗೆ ಸತತ ಮೂರನೇ ಪಂದ್ಯವಾಗಿದ್ದು, ನಿಯಮಿತವಾಗಿ ಆಡಲು ಸಾಧ್ಯವಾಗುತ್ತಿರುವ ಕಾರಣ ಆತ್ಮವಿಶ್ವಾಸ ಹೆಚ್ಚಿಸಿದೆ. ತಂಡದಲ್ಲಿ ರಿಷಭ್​ ಪಂತ್​, ಇಶಾಂತ್​ ಶರ್ಮಾ ಹಾಗೂ ಶಿಖರ್​ ಧವನ್​ ಅವರಂತಹ ಪ್ಲೇಯರ್ಸ್​ಗಳಿರುವುದು ನನಗೆ ಉತ್ತಮ ಬಾಂಧವ್ಯ ಬೆಳೆದಿದೆ ಎಂದರು.

ABOUT THE AUTHOR

...view details