ಕರ್ನಾಟಕ

karnataka

ETV Bharat / sports

ಮಂಕಾದ ಪವನ್​.. ಪಾಟ್ನಾ ಪೈರೇಟ್ಸ್​ ವಿರುದ್ಧ 2 ಅಂಕಗಳ ರೋಚಕ ಸೋಲು ಕಂಡ ಬುಲ್ಸ್​

ಬಲಿಷ್ಠ ತಂಡವಾಗಿರುವ ಪಾಟ್ನಾ ಪೈರೇಟ್ಸ್​ 16 ರೈಡಿಂಗ್​ ಅಂಕ ಮತ್ತು 17 ಟ್ಯಾಕಲ್ ಅಂಕ ಪಡೆದುಕೊಂಡರೆ, ಬೆಂಗಳೂರು 18 ರೈಡ್​ ಮತ್ತು 13 ಟ್ಯಾಕಲ್ ಅಂಕ ಪಡೆದುಕೊಂಡು ಕೇವಲ 2 ಅಂಕಗಳಿಂದ ಸೋಲೊಪ್ಪಿಕೊಂಡಿತು.

patna pirates beat  bengaluru bulls by 36-34
ಬೆಂಗಳೂರು ಬುಲ್ಸ್​ಗೆ ಸೋಲು

By

Published : Feb 15, 2022, 11:03 PM IST

ಬೆಂಗಳೂರು: ಅಗ್ರಸ್ಥಾನದಲ್ಲಿರುವ ಪಾಟ್ನಾ ಪೈರೇಟ್ಸ್ ವಿರುದ್ಧ ಬೆಂಗಳೂರು ಬುಲ್ಸ್​ 2 ಅಂಕಗಳ ರೋಚಕ ಸೋಲು ಕಂಡಿದ್ದು, ಪ್ಲೇ ಆಫ್​ ತಲುಪುವ ಅವಕಾಶ ಕ್ಷೀಣಿಸಿದೆ.

ಬಲಿಷ್ಠ ತಂಡವಾಗಿರುವ ಪಾಟ್ನಾ ಪೈರೇಟ್ಸ್​ 16 ರೈಡಿಂಗ್​ ಅಂಕ ಮತ್ತು 17 ಟ್ಯಾಕಲ್ ಅಂಕ ಪಡೆದುಕೊಂಡರೆ, ಬೆಂಗಳೂರು 18 ರೈಡ್​ ಮತ್ತು 13 ಟ್ಯಾಕಲ್ ಅಂಕ ಪಡೆದುಕೊಂಡು ಕೇವಲ 2 ಅಂಕಗಳಿಂದ ಸೋಲೊಪ್ಪಿಕೊಂಡಿತು.

ಮೊದಲಾರ್ಧದಲ್ಲಿ ಪಾಟ್ನಾ 19-14 ರಲ್ಲಿ ಮುನ್ನಡೆ ಪಡೆದುಕೊಂಡಿತು, ದ್ವಿತೀಯಾರ್ಧದಲ್ಲಿ ಬುಲ್ಸ್​ ಕಮ್​ಬ್ಯಾಕ್ ಮಾಡಿತ್ತಾದರೂ ಪಾಟ್ನಾ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ ತನ್ನ ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿತು. ಕೊನೆಯ ನಿಮಿಷದಲ್ಲಿ 34 - 34 ರಲ್ಲಿ ಸಮಬಲ ಸಾಧಿಸುವಲ್ಲಿ ಬುಲ್ಸ್ ಯಶಸ್ವಿಯಾದರೂ, ಪಾಟ್ನಾ ರೈಡರ್​ ಸಚಿನ್ ಒಂದು ಅಂಕ ಪಡೆದು 35-34ರಲ್ಲಿ ಮುನ್ನಡೆ ಹೆಚ್ಚಿಸಿಕೊಂಡರು.

ಕೊನೆಯ ರೈಡಿಂಗ್​ ಬುಲ್ಸ್​ಗೆ ಸಿಕ್ಕಿತ್ತು, ಕೇವಲ ಒಂದು ಅಂಕ ಪಡೆದು ಟೈ ಸಾಧಿಸುವ ಅವಕಾಶ ಕೂಡ ಇತ್ತು. ಆದರೆ, ಪವನ್​ ಅವರನ್ನು ​ಪಾಟ್ನಾ ಡಿಫೆಂಡರ್​ಗಳು ತಮ್ಮ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಪೈರೇಟ್ ತಂಡದ ಮೋನು ಗೋಯಟ್​ 7 ಬೋನಸ್​ ಜೊತೆ 9 ಅಂಕ ಪಡೆದರೆ, ಡಿಫೆಂಡರ್​ಗಳಾದ ಸುನಿಲ್​ ಮತ್ತು ಮೊಹಮ್ಮದ್ರೇಜಾ ಚಿಯಾನ್​ ತಲಾ 6 ಅಂಕ ಪಡೆದು ಬುಲ್ಸ್​ ಪಡೆಯ ರೈಡರ್ಸ್​ಗಳನ್ನು ಕಟ್ಟಿಹಾಕಿದರು. ನಾಯಕ ಪವನ್​ ಶೆರಾವತ್​ ಇಂದು ಕೇವಲ7 ಅಂಕ ಪಡೆದರೆ, ಚಂದ್ರನ್​ ರಂಜಿತ್​ 8 ಅಂಪ ಪಡೆದರು. ಸೌರಭ್ ನಂಡಲ್​ 3, ಮಯೂರ್, ಜೈದೀಪ್ ಮತ್ತು ಮಹೇಂದರ್​ ತಲಾ 2 ಟ್ಯಾಕಲ್ ಅಂಕ ಪಡೆದರು.

ಇದನ್ನೂ ಓದಿ:ಐಪಿಎಲ್​ನಲ್ಲಿ 3.2 ಕೋಟಿ ರೂ. ಡೀಲ್​.. ಅಪ್ಪನ ಕನಸನ್ನು ನನಸು ಮಾಡಿದ ವೇಗಿ ಯಶ್ ದಯಾಳ್​

ABOUT THE AUTHOR

...view details