ಬೆಂಗಳೂರು :ಆರಂಭದಲ್ಲಿ ಅಬ್ಬರಿಸಿ ಮಧ್ಯಂತರದಲ್ಲಿ ಮುಗ್ಗರಿಸಿ ಕಷ್ಟಪಟ್ಟು ಪ್ಲೇ ಆಫ್ಗೆ ಪ್ರವೇಶಿಸಿರುವ ಬೆಂಗಳೂರು ಬುಲ್ಸ್ ಸೋಮವಾರ ನಡೆಯಲಿರುವ ಗುಜರಾತ್ ಲಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿದೆ.
ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಗುಜರಾತ್ 22 ಪಂದ್ಯಗಳನ್ನಾಡಿ 68 ಅಂಕ ಪಡೆದು 4ನೇ ಸ್ಥಾನ ಪಡೆದರೆ, ಬುಲ್ಸ್ 66 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ. ಹಿಂದಿನ 2 ಮುಖಾಮುಖಿಯಲ್ಲಿ ಎರಡೂ ತಂಡಗಳು ತಲಾ ಒಂದು ಜಯ ಮತ್ತು ಸೋಲು ಕಂಡಿವೆ.
ಮೊದಲ ಮುಖಾಮುಖಿಯಲ್ಲಿ ಬುಲ್ಸ್ 46-37ರಲ್ಲಿ ಜಯ ಸಾಧಿಸಿದರೆ, 2ನೇ ಮುಖಾಮುಖಿಯಲ್ಲಿ ಜೈಂಟ್ಸ್ 40-36ರಲ್ಲಿ ಗೆಲುವಿನ ನಗೆ ಬೀರಿತ್ತು. ಸೋಮವಾರ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ವಿರುದ್ಧ ಯುಪಿ ಯೋಧ ಕಣಕ್ಕಿಳಿಯಲಿದೆ.