ಲಂಡನ್ :ಪ್ರಥಮ ದರ್ಜೆ ಕ್ರಿಕೆಟ್ಗೂ ಹಂಡ್ರೆಡ್ ಮಾದರಿಯ ಲೀಗ್ ಸ್ಪರ್ಧೆಯನ್ನು ಆಯೋಜಿಸುವುದರಿಂದ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ಗೆ ಅನುಕೂಲಕರವಾಗಲಿದೆ ಎಂದು ಮಾಜಿ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
2005, 2009, 2010-11, 2013ರ ಆ್ಯಶಸ್ ಟೆಸ್ಟ್ ಸರಣಿ ಜಯಿಸಿರುವ ಪೀಟರ್ಸನ್ ವಿಶ್ವದ ಪುರಾತನ ಪ್ರಥಮ ದರ್ಜೆ ಕ್ರಿಕೆಟ್ ಆಗಿರುವ ಕೌಂಟಿ ಚಾಂಪಿಯನ್ಶಿಪ್ ತನ್ನ ಹೊಳಪನ್ನು ಕಳೆದುಕೊಂಡಿದೆ.
ಟೆಸ್ಟ್ ತಂಡಕ್ಕೆ ಉತ್ತಮ ಸೇವೆ ಸಲ್ಲಿಸುವ ಆಟಗಾರರನ್ನು ಕೊಡುವುದಕ್ಕೆ ಅದು ಸೂಕ್ತವಾಗಿಲ್ಲ ಎಂದು ಸ್ಪೋರ್ಟ್ ವೆಬ್ಸೈಟ್ವೊಂದಕ್ಕೆ ಬರೆದ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಕ್ರಿಕೆಟ್ನಲ್ಲಿ ಎಲ್ಲಾ ಕಡೆಯಲ್ಲೂ ದುಡ್ಡು ಸಿಗುತ್ತಿರುವುದರಿಂದ ಅತ್ಯುತ್ತಮ ಆಟಗಾರರು ಕೌಂಟಿಯಲ್ಲಿ ಆಡುತ್ತಿಲ್ಲ. ಹಾಗಾಗಿ, ನಾನು ಈ ಹಿಂದೆ ಶ್ರೇಷ್ಠ ಆಟಗಾರರಿಂದ ಕಲಿತಂತೆ ಇಂದಿನ ಯುವ ಇಂಗ್ಲಿಷ್ ಆಟಗಾರರಿಗೆ ಕಲಿಯಲು ಅವಕಾಶ ಸಿಗುತ್ತಿಲ್ಲ.