ಕರ್ನಾಟಕ

karnataka

ETV Bharat / sports

ಬೆಟ್ಟದ ಮೇಲೆ ಮಾಜಿ ಗರ್ಲ್​​ಫ್ರೆಂಡ್​ ಜೊತೆ ಧೋನಿ ಫೋಟೋ ವೈರಲ್​​!? - ಬೆಟ್ಟದ ಮೇಲೆ ಮಾಜಿ ಗರ್ಲ್​​ಫ್ರೆಂಡ್​ ಜೊತೆ ಧೋನಿ

ಮಹೇಂದ್ರ ಸಿಂಗ್​ ಧೋನಿ ಬೆಟ್ಟದ ಮೇಲೆ ಹುಡುಗಿ ಜೊತೆ ನಿಂತುಕೊಂಡಿರುವ ಫೋಟೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

MS Dhoni
MS Dhoni

By

Published : May 22, 2021, 10:25 PM IST

Updated : May 22, 2021, 10:41 PM IST

ರಾಂಚಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಸದ್ಯ ಕುಟುಂಬದೊಂದಿಗೆ ರಾಂಚಿಯಲ್ಲಿ ಕಾಲಕಳೆಯುತ್ತಿದ್ದು, ಈ ವೇಳೆ ಅವರು ತಮ್ಮ ಸಾಕು ನಾಯಿ ಜೊತೆ ಆಟವಾಡ್ತಿದ್ದ ವಿಡಿಯೋವೊಂದು ನಿನ್ನೆ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಹುಡುಗಿಯ ಜೊತೆಗೆ ಧೋನಿ ಬೆಟ್ಟದ ಮೇಲೆ ನಿಂತುಕೊಂಡಾಗ ತೆಗೆದಿರುವ ಚಿತ್ರ ಇದಾಗಿದ್ದು, ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ತುಂಬಾ ವೈರಲ್​ ಆಗ್ತಿದೆ. ಆದರೆ, ಧೋನಿ ಜೊತೆ ನಿಂತುಕೊಂಡಿದ್ದು ಯಾರು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ. ಸೂರ್ಯಾಸ್ತದ ವೇಳೆ ಈ ಫೋಟೋ ಸೆರೆ ಹಿಡಿಯಲಾಗಿದೆ. ಆದರೆ, ಇದು ಮಹೇಂದ್ರ ಸಿಂಗ್​ ಧೋನಿ ಅವರ ದಿವಂಗತ ಗೆಳತಿ ಪ್ರಿಯಾಂಕಾ ಎಂದು ಹೇಳಲಾಗ್ತಿದೆ. ಆದರೆ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ಇದನ್ನೂ ಓದಿ: ಐಪಿಎಲ್​​ ರದ್ದಾದ ಬಳಿಕ ಏನ್​ ಮಾಡ್ತಿದ್ದಾರೆ ಧೋನಿ.. ಸಾಕ್ಷಿ ಹಂಚಿಕೊಂಡ್ರು ಈ ವಿಡಿಯೋ!

ಮಹೇಂದ್ರ ಸಿಂಗ್​ ಧೋನಿ ಜೀವನಾಧಾರಿತ ಚಿತ್ರ ಎಂಎಸ್​ ಧೋನಿ ದಿ ಅನ್ಟೋಲ್ಡ್​​ ಸ್ಟೋರಿಯಲ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳಲಾಗಿತ್ತು. ಈ ವೇಳೆ ಒಂದು ಪ್ರೇಮಕಥೆಯೂ ಇತ್ತು. ಇಲ್ಲಿ ಧೋನಿ ಪ್ರಿಯಾಂಕಾ ಎಂಬ ಹೆಸರಿನ ಹುಡುಗಿ ಪ್ರೀತಿಸಿದ್ದರು. ಆದರೆ, ಆಕೆ ಅಪಘಾತದ ವೇಳೆ ಸಾವನ್ನಪ್ಪಿದ್ದರು. ಮಾಜಿ ಲವರ್ ಪ್ರಿಯಾಂಕಾ ಜೊತೆ ಧೋನಿ ನಿಂತುಕೊಂಡಿದ್ದಾರೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದು, ಇನ್ನು ಕೆಲವರು ಸಾಕ್ಷಿ ಜೊತೆಗಿನ ಫೋಟೋ ಇದಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದಾದ ಬಳಿಕ ಸಾಕ್ಷಿ ಜತೆ ಮಹೇಂದ್ರ ಸಿಂಗ್​ ಧೋನಿ ಮದುವೆಯಾಗಿದ್ದು, ಇದೀಗ ಮುದ್ದಾದ ಹೆಣ್ಣು ಮಗುವಿದೆ. ಸದ್ಯ ಈ ಫೋಟೋ ವೈರಲ್​ ಆಗಿದ್ದು, ಹೆಚ್ಚಿನ ಆಶ್ಚರ್ಯ ಮೂಡಿಸಿದೆ.

Last Updated : May 22, 2021, 10:41 PM IST

For All Latest Updates

ABOUT THE AUTHOR

...view details