ಕರ್ನಾಟಕ

karnataka

ETV Bharat / sports

ಭಾರತ-ಪಾಕಿಸ್ತಾನ ಸಹಿತ 4 ರಾಷ್ಟ್ರಗಳ T-20 ಪಂದ್ಯಾವಳಿ ಆಯೋಜನೆಗೆ PCB ಪ್ರಸ್ತಾವನೆ - PCB proposes 4-nation T20 series including India

PCB proposes 4-nation including India, T20 series: ಕ್ರಿಕೆಟ್​ನ ದೈತ್ಯ ತಂಡಗಳಾದ ಭಾರತ, ಪಾಕಿಸ್ತಾನ, ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಮಧ್ಯೆ ಪ್ರತ್ಯೇಕವಾಗಿ ವರ್ಷಕ್ಕೊಮ್ಮೆ 'ಅಂತಾರಾಷ್ಟ್ರೀಯ ಟಿ-20 ಸೂಪರ್​ ಸಿರೀಸ್'​ ಆಯೋಜಿಸಲು ಐಸಿಸಿಗೆ ಪ್ರಸ್ತಾವನೆ ಸಲ್ಲಿಸಲು ಪಾಕ್​ ಕ್ರಿಕೆಟ್​ ಮಂಡಳಿ ಮುಂದಾಗಿದೆ.

india-pakistan
ಭಾರತ- ಪಾಕಿಸ್ತಾನ

By

Published : Jan 12, 2022, 3:40 PM IST

ಕರಾಚಿ:ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹಲವು ವರ್ಷಗಳಿಂದ ದ್ವಿಪಕ್ಷೀಯ ಕ್ರಿಕೆಟ್​ ಸರಣಿ ನಡೆದೇ ಇಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಬೇಸರವೂ ಇದೆ. ಹೀಗಾಗಿ ಪಾಕ್​ ಮತ್ತು ಭಾರತದ ಮಧ್ಯೆ ಮತ್ತೆ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಲು ಪಾಕಿಸ್ತಾನ ಹೊಸ ಐಡಿಯಾವೊಂದನ್ನು ಹಾಕಿಕೊಂಡಿದೆ.

ಕ್ರಿಕೆಟ್​ನ ದೈತ್ಯ ತಂಡಗಳಾದ ಭಾರತ, ಪಾಕಿಸ್ತಾನ, ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಮಧ್ಯೆ ಪ್ರತ್ಯೇಕವಾಗಿ ವರ್ಷಕ್ಕೊಮ್ಮೆ 'ಅಂತಾರಾಷ್ಟ್ರೀಯ ಟಿ-20 ಸೂಪರ್​ ಸಿರೀಸ್'​ ಆಯೋಜಿಸಲು ಐಸಿಸಿಗೆ ಪ್ರಸ್ತಾವನೆ ಸಲ್ಲಿಸಲು ಪಾಕ್​ ಕ್ರಿಕೆಟ್​ ಮಂಡಳಿ ಮುಂದಾಗಿದೆ.

ಈ ಸರಣಿ ವರ್ಷಕ್ಕೊಮ್ಮೆ ನಡೆಸುವುದಾಗಿದ್ದು, ನಾಲ್ಕು ರಾಷ್ಟ್ರಗಳೂ ಪ್ರತಿವರ್ಷ ಸರಣಿಯ ಆತಿಥ್ಯ ವಹಿಸಲಿವೆ. ಇದರಲ್ಲಿ ಬಂದ ಆದಾಯವನ್ನು ಎಲ್ಲಾ ಕ್ರಿಕೆಟ್​ ಮಂಡಳಿಗಳು ಹಂಚಿಕೊಳ್ಳಬಹುದಾಗಿದೆ ಎಂಬುದು ಪಾಕ್​ ಕ್ರಿಕೆಟ್​ ಮಂಡಳಿಯ ಚಿಂತನೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪಾಕ್​ ಕ್ರಿಕೆಟ್​ ಮಂಡಳಿ ಅಧ್ಯಕ್ಷ ರಮೀಜ್​ ರಾಜಾ, 'ಹಲೋ ಅಭಿಮಾನಿಗಳೇ, ನಿಮಗೊಂದು ಸಂತಸದ ಸುದ್ದಿ. ಭಾರತ, ಪಾಕಿಸ್ತಾನ, ಇಂಗ್ಲೆಂಡ್​, ಆಸ್ಟ್ರೇಲಿಯಾ ಮಧ್ಯೆ ಪ್ರತ್ಯೇಕವಾಗಿ ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಟಿ-20 ಪಂದ್ಯಾವಳಿ ಆಯೋಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಗೆ(ಐಸಿಸಿಗೆ) ಪ್ರಸ್ತಾವನೆ ಸಲ್ಲಿಸಲಾಗುವುದು. ಒಂದು ವೇಳೆ ಇದು ಸಾಕಾರಗೊಂಡರೆ ಹೇಗಿರಬಹುದು ಯೋಚಿಸಿ' ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕ್​ ಮಧ್ಯೆ ನಿಂತು ಹೋಗಿರುವ ಕ್ರಿಕೆಟ್​ ಆಟಕ್ಕೆ ಜೀವ ತುಂಬುವುದು PCBಯ ಈ ಯೋಜನೆ ಹಿಂದಿನ ಉದ್ದೇಶವಾಗಿದೆ. ಆದರೆ, ಭಾರತ ಈಗಾಗಲೇ ಮುಂದಿನ ಕೆಲ ವರ್ಷಗಳವರೆಗೆ ಇತರೆ ತಂಡಗಳ ಜೊತೆ ಕ್ರಿಕೆಟ್​ ಸರಣಿಗಳ ಪಟ್ಟಿಯನ್ನು ರೂಪಿಸಿದೆ. ಇದಕ್ಕೂ ಮಿಗಿಲಾಗಿ ತ್ರಿ-ರಾಷ್ಟ್ರ ಮತ್ತು 4 ರಾಷ್ಟ್ರಗಳ ನಡುವಿನ ಸರಣಿಯಲ್ಲಿ ಆಡುವುದನ್ನು ಭಾರತ ಈಗಾಗಲೇ ನಿಲ್ಲಿಸಿದೆ. ಈ ಮಧ್ಯೆಯೂ ಪಾಕಿಸ್ತಾನ ಇಂಥದ್ದೊಂದು ಯೋಜನೆ ರೂಪಿಸಲು ಮುಂದಾಗಿದೆ.

2012-13 ರಲ್ಲಿ ನಡೆದ ಟಿ-20 ಸರಣಿಯೇ ಭಾರತ- ಪಾಕಿಸ್ತಾನ ನಡುವಿನ ಕೊನೆಯ ಸರಣಿಯಾಗಿದೆ. ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ರಾಜತಾಂತ್ರಿಕ ಸಮಸ್ಯೆಯಿಂದಾಗಿ ದ್ವಿಪಕ್ಷೀಯ ಕ್ರಿಕೆಟ್​ ಸರಣಿಗಳನ್ನು ಸ್ಥಗಿತಗೊಳಿಸಲಾಗಿದೆ. ಐಸಿಸಿ ಆಯೋಜಿಸುವ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ.

ಇದನ್ನೂ ಓದಿ:U19 ವಿಶ್ವಕಪ್​ ಅಭ್ಯಾಸ ಪಂದ್ಯ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 9 ವಿಕೆಟ್‌ಗಳ ಜಯ

ABOUT THE AUTHOR

...view details