ಕರ್ನಾಟಕ

karnataka

ETV Bharat / sports

ಈ ಯುವಕ​ ಐಪಿಎಲ್​ನ ಶ್ರೇಷ್ಠ ಡೆತ್​ ಬೌಲರ್: ಕಗಿಸೋ ರಬಾಡ ಮೆಚ್ಚುಗೆ - ಇಂಡಿಯನ್ ಪ್ರೀಮಿಯರ್​ ಲೀಗ್

ಐಪಿಎಲ್​ನಲ್ಲಿ ಅರ್ಶದೀಪ್​ ಅತ್ಯುತ್ತಮ ಡೆತ್​ ಬೌಲರ್​. ಅಂಕಿಅಂಶಗಳೇ ಅದನ್ನು ಹೇಳುತ್ತಿವೆ. ಸಾಕಷ್ಟು ಮಹತ್ವಾಕಾಂಕ್ಷೆಯನ್ನು ಅವರು ಹೊಂದಿದ್ದಾರೆ ಮತ್ತು ಅದಕ್ಕೆ ತಕ್ಕ ಪ್ರತಿಭೆ ಅವರಲ್ಲಿದೆ ಎಂದು ದಕ್ಷಿಣ ಆಫ್ರಿಕಾ ಪೇಸರ್​ ರಬಾಡಾ ಪಂದ್ಯ ಮುಗಿದ ಮಾತನಾಡಿದರು.

Arshdeep perhaps the best death-overs bowler in IPL
ಕಗಿಸೋ ರಬಾಡ

By

Published : Apr 26, 2022, 4:07 PM IST

ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಅರ್ಶದೀಪ್​ ಸಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ದಕ್ಷಿಣ ಆಫ್ರಿಕಾದ ಕಗಿಯೋ ರಬಾಡ, 23 ವರ್ಷದ ಯುವ ವೇಗಿ ಇಂಡಿಯನ್ ಪ್ರೀಮಿಯರ್​ ಲೀಗ್​ನ ಶ್ರೇಷ್ಠ ಡೆತ್​ ಬೌಲರ್​ ಎಂದು ಪ್ರಶಂಸಿಸಿದ್ದಾರೆ. ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ 11 ರನ್​ಗಳಿಂದ ಗೆಲ್ಲುವುದಕ್ಕೆ ಅರ್ಶದೀಪ್ ಮತ್ತು ರಬಾಡ ಪ್ರದರ್ಶನ ಪಂಜಾಬ್ ತಂಡಕ್ಕೆ ದೊಡ್ಡ ತಿರುವಾಗಿತ್ತು.

ಅದರಲ್ಲೂ, 24 ಎಸೆತಗಳಿಗೆ 47 ರನ್​ಗಳ ಅಗತ್ಯವಿದ್ದ ಸಂದರ್ಭದಲ್ಲಿ 17ನೇ ಓವರ್​ ಬೌಲಿಂಗ್ ಮಾಡಿದ ಅರ್ಶದೀಪ್, ಸೆಟ್​ ಬ್ಯಾಟರ್​ಗಳಾದ ಅಂಬಾಟಿ ರಾಯುಡು ಮತ್ತು ಜಡೇಜಾ ವಿರುದ್ಧ ಕೇವಲ 6 ರನ್​ ಬಿಟ್ಟುಕೊಟ್ಟರೆ, ನಂತರ 19ನೇ ಓವರ್​ನಲ್ಲಿ ಕೇವಲ ಧೋನಿ-ಜಡೇಜಾ ವಿರುದ್ಧ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ ಕೇವಲ ಒಂದು ಬೌಂಡರಿಸಹಿತ 8 ರನ್​ ಮಾತ್ರ ನೀಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಕೊನೆಗೆ ಸಿಎಸ್​ಕೆ ಗೆಲ್ಲಲು ಕೊನೆಯ ಓವರ್​ನಲ್ಲಿ 27 ರನ್​ಗಳ ಅಗತ್ಯವಿತ್ತು. ಆದರೆ ಕೇವಲ 15 ರನ್​ಗಳಿಸಿ 11 ರನ್​ಗಳಿಂದ ಸೋಲು ಕಂಡಿತು.

ಅರ್ಶದೀಪ್​ ಸಿಂಗ್

ಈ ಸ್ಪರ್ಧೆಯಲ್ಲಿ ಅರ್ಶದೀಪ್​ ಅತ್ಯುತ್ತಮ ಡೆತ್​ ಬೌಲರ್​ ಎಂದು ನಾನು ಭಾವಿಸುತ್ತೇನೆ. ಅಂಕಿಅಂಶಗಳೇ ಅದನ್ನು ಹೇಳುತ್ತಿವೆ. ಉದಯೋನ್ಮುಖ ಬೌಲರ್ ಸಾಕಷ್ಟು ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದಾರೆ ಮತ್ತು ಅದಕ್ಕೆ ತಕ್ಕ ಪ್ರತಿಭೆ ಅವರಲ್ಲಿದೆ. ಆತ ಒಳ್ಳೆಯ ವ್ಯಕ್ತಿ ಕೂಡಾ ಎಂದು ದಕ್ಷಿಣ ಆಫ್ರಿಕಾ ಪೇಸರ್​ ಪಂದ್ಯ ಮುಗಿದ ನಂತರ ತಿಳಿಸಿದರು.

"ನಾನು ಸದಾ ಡೆತ್‌ ಓವರ್​ಗಳಲ್ಲಿ ಬೌಲಿಂಗ್ ಮಾಡುತ್ತೇನೆ. ಹಾಗಾಗಿ ನಾನೇ ಡೆತ್‌ನಲ್ಲಿ ಬೌಲಿಂಗ್ ಮಾಡಲಿದ್ದೇನೆ ಎಂದು ನನಗೆ ತಿಳಿದಿತ್ತು. ಆದರೆ ಆ ವಿಭಾಗದಲ್ಲಿ ಅರ್ಶದೀಪ್​ ಅದ್ಭುತ ಮತ್ತು ಅತ್ಯುತ್ತಮ ಶಿಸ್ತು ಹೊಂದಿದ್ದಾರೆ" ಎಂದು 8 ಕೋಟಿ ರೂ.ಗೆ ಪಂಜಾಬ್ ಸೇರಿರುವ ವೇಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಯುಡು ಆಟ ವ್ಯರ್ಥ.. ಧವನ್​ ಬ್ಯಾಟಿಂಗ್​,ಸಂಘಟಿತ ಬೌಲಿಂಗ್​​ ಪ್ರದರ್ಶನದಿಂದ ಚೆನ್ನೈ ವಿರುದ್ಧ ಗೆದ್ದ ಪಂಜಾಬ್​​

ABOUT THE AUTHOR

...view details