ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ರಿಕಿ ಪಾಂಟಿಂಗ್ ಯುವ ಆಟಗಾರ ರಿಷಭ್ ಪಂತ್ ಅವರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕಿವೀಸ್ ನಾಯಕ ವಿಲಿಯಮ್ಸನ್ಗೆ ಹೋಲಿಕೆ ಮಾಡಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೊನೆಯ ತನಕ ಇದ್ದರೆ ತಂಡವನ್ನು ಗೆಲುವಿನ ದಡ ದಾಟಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯದ ಕಾರಣ ಐಪಿಎಲ್ನಿಂದ ಹೊರ ಬಿದ್ದ ಮೇಲೆ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದರು. ಮೊದಲ ಪಂದ್ಯದಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು.
" ರಿಷಭ್ ಪಂತ್ ಕೀಪಿಂಗ್ ಕುರಿತು ಯಾವಾಗಲೂ ಪ್ರಶ್ನೆಯಿರುತ್ತಿತ್ತು. ಆದರೆ ಕೀಪಿಂಗ್ನಲ್ಲಿ ಅವರ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಆದರೆ, ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಅವರು ಟರ್ನಿಂಗ್ ಪಿಚ್ನಲ್ಲಿ ಇಂಗ್ಲೆಂಡ್ ವಿರುದ್ಧ ನಾನು ಅಂದುಕೊಂಡಿದ್ದಕ್ಕಿಂತ ಅತ್ಯುತ್ತಮವಾಗಿ ಕೀಪಿಂಗ್ ಮಾಡಿದ್ದಾರೆ. ಅವರು ತಮ್ಮ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಸುಧಾರಿಸಿಕೊಳ್ಳುವುದು ಮುಂದುವರಿಸಿದರೆ, ಮುಂದಿನ 10ರಿಂದ 12 ವರ್ಷಗಳ ಕಾಲ ಭಾರತ ತಂಡಕ್ಕೆ ವಿಕೆಟ್ ಕೀಪರ್ ಆಗಲಿದ್ದಾರೆ. ಅವರು ತಂಡದಲ್ಲಿರುವುದು ಅದ್ಭುತ ಮತ್ತು ಅವರು ಸದಾ ಸ್ಪರ್ಧೆಯಲ್ಲಿರಲು ಇಷ್ಟಪಡುತ್ತಾರೆ" ಎಂದು cricket.com.au.ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.