ಡರ್ಹಮ್: ಕೋವಿಡ್ ಪಾಸಿಟಿವ್ ಪಡೆದಿದ್ದ ಬೌಲಿಂಗ್ ಕೋಚ್ ಭರತ್ ಅರುಣ್ ಜೊತೆ ಸಂಪರ್ಕದಲ್ಲಿದ್ದ ಕಾರಣ ಕಳೆದ ಒಂದು ವಾರ ಐಸೊಲೇಸನ್ನಲ್ಲಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮತ್ತು ಮೀಸಲು ಓಪನರ್ ಅಭಿಮನ್ಯು ಈಶ್ವರನ್ ಶುಕ್ರವಾರ ಡರ್ಹಮ್ನಲ್ಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಈಗಾಗಲೇ ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ವೇಗದ ಬೌಲರ್ ಆವೇಶ್ ಖಾನ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಈಶ್ವರನ್ ಬ್ಯಾಕ್ಅಪ್ ಆರಂಭಿಕನಾಗಿ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ. ಅವರನ್ನು ಮೀಸಲು ಆಟಗಾರನಾಗಿ ಆವೇಶ್ ಖಾನ್, ಪ್ರಸಿಧ್ ಕೃಷ್ಣ ಜೊತೆಗೆ ಆಯ್ಕೆ ಮಾಡಲಾಗಿತ್ತು.