ಕರ್ನಾಟಕ

karnataka

ETV Bharat / sports

14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಪಾಕಿಸ್ತಾನಿ ಸ್ಪಿನ್ನರ್​ ಯಾಸಿರ್​ ಶಾ ವಿರುದ್ಧ ಎಫ್​ಐಆರ್​ - ಯಾಸಿರ್​ ಶಾ ವಿರುದ್ಧ ಅತ್ಯಾಚಾರ ಆರೋಪ

ಬಾಲಕಿಗೆ ಯಾಸಿರ್ ಶಾ ಮತ್ತು ಆತನ ಸ್ನೇಹಿತ ಫರ್ಹಾನ್ ಸೇರಿ ಗನ್​ ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ಪೊಲೀಸ್​ ಅಧಿಕಾರಿಗಳನ್ನು ಸಂಪರ್ಕಿಸಿದರೆ ಪರಿಣಾಮ ಕೆಟ್ಟದಾಗಿರುತ್ತದೆ ಯಾಸಿರ್ ಎಚ್ಚರಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಇಸ್ಲಾಮಾಬಾದ್​ನ ಶಾಲಿಮಾರ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Rape case against Yasir Shah
ಯಾಸಿರ್​ ಶಾ ವಿರುದ್ಧ ಅತ್ಯಾಚಾರ ಪ್ರಕರಣ

By

Published : Dec 20, 2021, 9:11 PM IST

ಇಸ್ಲಾಮಾದ್​:ಪಾಕಿಸ್ತಾನ ಕ್ರಿಕೆಟ್ ತಂಡದ ಲೆಗ್​ ಸ್ಪಿನ್ನರ್ ಯಾಸಿರ್ ಶಾ ವಿರುದ್ಧ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಬಾಲಕಿಗೆ ಯಾಸಿರ್ ಶಾ ಮತ್ತು ಆತನ ಸ್ನೇಹಿತ ಫರ್ಹಾನ್ ಸೇರಿ ಗನ್​ ತೋರಿಸಿ ಅತ್ಯಾಚಾರ ಎಸಗಿದ್ದಾರೆ.

ಜೊತೆಗೆ ಪೊಲೀಸ್​ ಅಧಿಕಾರಿಗಳನ್ನು ಸಂಪರ್ಕಿಸಿದ್ದರ ಪರಿಣಾಮ ಕೆಟ್ಟದಾಗಿರುತ್ತದೆ ಯಾಸಿರ್ ಎಚ್ಚರಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಇಸ್ಲಾಮಾಬಾದ್​ನ ಶಾಲಿಮಾರ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾಸಿರ್​ ಮತ್ತು ಆತನ ಗೆಳೆಯ ಫರಾನ್​ ಗನ್​ ತೋರಿಸಿ ಅತ್ಯಾಚಾರ ಮಾಡಿದರು. ಇದನ್ನು ವಿಡಿಯೋ ಮಾಡಿಕೊಂಡು ಕಿರುಕುಳ ನೀಡಿದ್ದಾರೆ. ಇದರ ಬಗ್ಗೆ ವಾಟ್ಸ್ ​ಆ್ಯಪ್​​ನಲ್ಲಿ ಯಾಸಿರ್​ ಕೇಳಿದಕ್ಕೆ ತಾವೂ ಚಿಕ್ಕ ವಯಸ್ಸಿನ ಹುಡುಗಿಯರನ್ನು ಇಷ್ಟಪಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಪೊಲೀಸ್​ ಅಥವಾ ಯಾವುದೇ ಅಧಿಕಾರಿಗಳ ಮುಂದೆ ಈ ಘಟನೆ ಬಗ್ಗೆ ತಿಳಿಸಿದರೆ ಪರಿಣಾಮ ಸರಿಯಿರಲ್ಲ. ನಾನು ತುಂಬಾ ಪ್ರಭಾವಿ ವ್ಯಕ್ತಿ, ನನಗೆ ತುಂಬಾ ದೊಡ್ಡ ಅಧಿಕಾರಿಗಳ ಪರಿಚಯವಿದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ಬಾಲಕಿ ಪೊಲೀಸರನ್ನು ಸಂಪರ್ಕಿಸಿದ ನಂತರ ಯಾಸಿರ್​ ಕರೆ ಮಾಡಿ, ಒಂದು ಪ್ಲಾಟ್​ ಖರೀದಿಸಿ ಕೊಡುವುದಾಗಿ ಮತ್ತು ಮುಂದಿನ 18 ವರ್ಷಗಳ ಕಾಲ ನನ್ನ ಎಲ್ಲ ವೆಚ್ಚವನ್ನು ಭರಿಸುವುದಾಗಿ ಹೇಳಿದರು ಎಂದು ಪೊಲೀಸರ ಮುಂದೆ ಬಾಲಕಿ ಹೇಳಿದ್ದಾರೆ. ಸದ್ಯ ಯಾಸಿರ್ ಶಾ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಯುವತಿಯ ವೈದ್ಯಕೀಯ ಪರೀಕ್ಷೆ ನಂತರ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ನಾಯಕನಾಗಿ ಹೆಚ್ಚು ಟೆಸ್ಟ್​ ಪಂದ್ಯಗಳಲ್ಲಿ ಸೋಲು ಕಂಡ ಜೋ ರೂಟ್

ABOUT THE AUTHOR

...view details