ನವದೆಹಲಿ: ಭಾರತದ ಟಿ20 ಮಾದರಿಯ ದೇಶೀಯ ಟೂರ್ನಿ ಐಪಿಎಲ್ ವಿಶ್ವದಾದ್ಯಂತ ಅತ್ಯಂತ ಯಶಸ್ವಿ ಲೀಗ್ ಆಗಿದೆ. ಈ ವರ್ಷದಿಂದ ಮಹಿಳಾ ಐಪಿಎಲ್ ಕೂಡ ಆರಂಭವಾಗಲಿದೆ. ಮುಂದಿನ ತಿಂಗಳು ಮಹಿಳಾ ಐಪಿಎಲ್ನ ಬೃಹತ್ ಹರಾಜು ನಡೆಯಲಿದೆ. ಭಾರತದ ವನಿತೆಯರ ಐಪಿಎಲ್ ತಯಾರಿ ಕಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಲ್ಲಿನ ಮಹಿಳಾ ಟಿ20 ಲೀಗ್‌ನ್ನು ಮುಂದುಡುತ್ತಿದೆ.
ಐಪಿಎಲ್ 2023ಕ್ಕೂ ಮುನ್ನ ಈ ಬಾರಿ ಮಹಿಳಾ ಐಪಿಎಲ್ ನಡೆಯಲಿದೆ. ಮೊದಲ ವನಿತೆಯರ ಐಪಿಎಲ್ಗೆ ಜನರು ಕಾತರದಿಂದ ಕಾಯುತ್ತಿದ್ದಾರೆ. ಪಾಕಿಸ್ತಾನ ಮಹಿಳಾ ಟಿ20 ಲೀಗ್‌ನ ಮೊದಲ ಸೀಸನ್ ಮಾರ್ಚ್‌ನಲ್ಲಿ ನಡೆಯಬೇಕಿತ್ತು. ಆದರೆ, ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮಾರ್ಚ್‌ನಲ್ಲಿ ಬದಲಾಗಿ ಸೆಪ್ಟೆಂಬರ್‌ನಲ್ಲಿ ನಡೆಸುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲಿ ಮಹಿಳಾ ಐಪಿಎಲ್ ನಡೆಯಲಿರುವುದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಹೊಸ ಆಡಳಿತದ ಹೊಸ ನಿರ್ಧಾರ:ರಮೀಜ್ ರಾಜಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದಾಗ ಹೊಸ ಮ್ಯಾನೇಜ್‌ಮೆಂಟ್‌ನ ಹೊಸ ನಿರ್ಧಾರವಾಗಿ ಮಹಿಳಾ ಟಿ 20 ಲೀಗ್ ಪ್ರಾರಂಭಿಸಲಾಯಿತು. ಆದರೆ, ಈ ಹಿಂದೆ ಪಾಕಿಸ್ತಾನದಲ್ಲಿ ದಂಗೆ ನಡೆದಿತ್ತು. ರಮೀಜ್ ಬದಲಿಗೆ ನಜಮ್ ಸೇಥಿ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತರು. ಇದೀಗ ಪಾಕಿಸ್ತಾನದ ಹೊಸ ಮ್ಯಾನೇಜ್‌ಮೆಂಟ್ ಸೆಪ್ಟೆಂಬರ್‌ನಲ್ಲಿ ಮಹಿಳಾ ಟಿ20 ಲೀಗ್ ಆಯೋಜಿಸಲು ನಿರ್ಧರಿಸಿದೆ. ಈ ಮೊದಲು ಲೀಗ್‌ನಲ್ಲಿ 4 ತಂಡಗಳು ಆಡಲಿದೆ ಎನ್ನಲಾಗಿತ್ತು, ಈಗ ಮೊದಲ ಸೀಸನ್ 5 ತಂಡಗಳೊಂದಿಗೆ ಆಯೋಜಿಸಲಾಗುವುದು ಎಂದು ವರದಿಯಾಗಿದೆ.
ಶೀಘ್ರವೇ ಐಪಿಎಲ್ ಆಟಗಾರ್ತಿಯರ ಹರಾಜು:ಶೀಘ್ರದಲ್ಲೇ ಮಹಿಳಾ ಐಪಿಎಲ್ 2023 ಸೀಸನ್‌ಗಾಗಿ ಆಟಗಾರ್ತಿಯರ ಹರಾಜು ಪ್ರಕ್ರಿಯೆ ನಡೆಯಲಿದೆ. ಮಹಿಳಾ ಐಪಿಎಲ್ ಋತುವಿನ ವೇಳಾಪಟ್ಟಿ ಕೂಡ ಇನ್ನೂ ಬಿಡುಗಡೆಯಾಗಿಲ್ಲ. ಹಾಗೇ ಆಟಗಾರ್ತಿಯರ ಪಟ್ಟಿಯನ್ನು ತಿಳಿಸಿಲ್ಲ. ಮಹಿಳಾ ಲೀಗ್ ಈ ವರ್ಷದ ಮಾರ್ಚ್ 3 ರಿಂದ 26 ರವರೆಗೆ ನಡೆಯುವ ಸಾಧ್ಯತೆಯಿದೆ. ಈ ಋತುವಿನಲ್ಲಿ ಒಟ್ಟು 22 ಪಂದ್ಯಗಳು ನಡೆಸಲು ಯೋಜಿಸಲಾಗಿದೆ.