ಕರ್ನಾಟಕ

karnataka

ETV Bharat / sports

ವೆಸ್ಟ್​ ಇಂಡೀಸ್​​ ವಿರುದ್ಧ ಮೊದಲ ಟಿ20 ಗೆದ್ದ ಪಾಕ್​​.. ಚುಟುಕು ಕ್ರಿಕೆಟ್​ನಲ್ಲಿ ಹೊಸ ದಾಖಲೆ - ವೆಸ್ಟ್​ ಇಂಡೀಸ್ ವಿರುದ್ಧ ಗೆದ್ದ ಪಾಕ್​

Pakistan vs West Indies T20: ಕರಾಚಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಪಾಕಿಸ್ತಾನ ತಂಡ ಚುಟುಕು ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ಬರೆದಿದೆ.

Pakistan vs West Indies T20
Pakistan vs West Indies T20

By

Published : Dec 14, 2021, 6:41 AM IST

Updated : Dec 14, 2021, 7:01 AM IST

ಕರಾಚಿ:ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆತಿಥೇಯ ಪಾಕ್​ ತಂಡ 63ರನ್​ಗಳ ಜಯ ದಾಖಲಿಸಿದ್ದು, ಈ ಮೂಲಕ ಚುಟುಕು ಕ್ರಿಕೆಟ್​​ನಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.

ಕರಾಚಿಯ ರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್​ಗಳಲ್ಲಿ ವಿಕೆಟ್ ಕೀಪರ್​​ ರಿಜ್ವಾನ್​ ಹಾಗೂ ಹೈದರ್ ಅಲಿ ಭರ್ಜರಿ ಬ್ಯಾಟಿಂಗ್​ ನೆರವಿನಿಂದ 6 ವಿಕೆಟ್ ​ನಷ್ಟಕ್ಕೆ 200ರನ್​ಗಳಿಸಿತು. ಇದನ್ನು ಬೆನ್ನತ್ತಿದ್ದ ವೆಸ್ಟ್​ ಇಂಡೀಸ್ ತಂಡ 19 ಓವರ್​​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಕೇವಲ 137ರನ್​​ ಮಾತ್ರ ಗಳಿಸುವಲ್ಲಿ ಶಕ್ತವಾಯಿತು. ಈ ಮೂಲಕ ಪಾಕ್​ ಟೀಂ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿರಿ:ಒಂದೇ ಓವರ್​​ನಲ್ಲಿ 6 ವಿಕೆಟ್​​​: ಪಾಕ್​​​ ವಿರುದ್ಧ ಹೊಸ ಇತಿಹಾಸ ಬರೆದ ಭಾರತ ಮೂಲದ ಹರ್ಷಿತ್​​​ ಸೇಠ್​!

ಹೊಸ ಇತಿಹಾಸ ಬರೆದ ಪಾಕ್​​

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಪಂದ್ಯ ಗೆಲ್ಲುತ್ತಿದ್ದಂತೆ ಪಾಕಿಸ್ತಾನ ಚುಟುಕು ಕ್ರಿಕೆಟ್​ನಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ. ಪ್ರಸಕ್ತ ಕ್ಯಾಲೆಂಡರ್​​ ವರ್ಷದಲ್ಲಿ ಒಟ್ಟು 18 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಸಾಧನೆ ಪಾಕಿಸ್ತಾನ ಮಾಡಿದ್ದು, ಈ ಹಿಂದೆ ಯಾವುದೇ ತಂಡಗಳು ಒಂದೇ ವರ್ಷದಲ್ಲಿ ಇಷ್ಟೊಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿಲ್ಲ. ವಿಶೇಷವೆಂದರೆ 2017ರಲ್ಲಿ ಪಾಕ್​ ತಂಡ ಒಂದೇ ವರ್ಷದಲ್ಲಿ 17 ಪಂದ್ಯಗಳಲ್ಲಿ ಜಯ ಸಾಧಿಸಿತ್ತು.

ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ ಹೈದರ್​

ವೆಸ್ಟ್​ ಇಂಡೀಸ್​ ವಿರುದ್ಧ ಇಂದು(ಡಿ.14) ಹಾಗೂ ನಾಡಿದ್ದು(ಡಿ.16) ಮತ್ತೆರೆಡು ಟಿ20 ಪಂದ್ಯಗಳಲ್ಲಿ ಪಾಕ್​ ಭಾಗಿಯಾಗಲಿದ್ದು, ಇಲ್ಲೂ ಗೆಲ್ಲುವು ಸಾಧಿಸುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.

Last Updated : Dec 14, 2021, 7:01 AM IST

ABOUT THE AUTHOR

...view details