ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಪಾಕಿಸ್ತಾನದ ಸೂಪರ್ ಲೀಗ್ 2025ರಲ್ಲಿ ಒಂದೇ ಸಮಯದಲ್ಲಿ ನಡೆಯಲಿದೆ. ವಿದೇಶಿ ಆಟಗಾರರು ಯಾವ ಲೀಗ್ನಲ್ಲಿ ಭಾಗಿಯಾಗಲಿದ್ದಾರೆಂಬುದು ಇದೀಗ ಹುಟ್ಟುಕೊಂಡಿರುವ ಪ್ರಶ್ನೆ. ಜೊತೆಗೆ ಫ್ರಾಂಚೈಸಿಗಳೂ ಕೂಡಾ ಗೊಂದಲಕ್ಕೊಳಗಾಗಿವೆ.
2025ರಲ್ಲಿ ಪಾಕಿಸ್ತಾನದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡಿದೆ. ಇದರ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಪಾಕಿಸ್ತಾನದಲ್ಲೂ ಪಾಕ್ ಸೂಪರ್ ಲೀಗ್ ನಡೆಯಲಿದೆ. ಐಪಿಎಲ್ ಸುಮಾರು ಎರಡೂವರೆ ತಿಂಗಳ ಅವಧಿ ಮಾರ್ಚ್ನಿಂದ ಪ್ರಾರಂಭವಾಗಿ ಜೂನ್ವರೆಗೆ ನಡೆಯುತ್ತದೆ. ಪಾಕ್ನಲ್ಲಿ ಮಾರ್ಚ್- ಮೇ ತಿಂಗಳಲ್ಲಿ ಪಾಕ್ನಲ್ಲಿ ಟಿ20 ಲೀಗ್ ಆಯೋಜನೆಗೊಳ್ಳಲಿದೆ. ಐಪಿಎಲ್ನೊಂದಿಗೆ ಪಾಕ್ ಲೀಗ್ ಕ್ಲ್ಯಾಶ್ ಆಗ್ತಿರುವುದು ಇದೇ ಮೊದಲು. ಹೀಗಾಗಿ, ಆಟಗಾರರು ಯಾವ ತಂಡದಲ್ಲಿ ಭಾಗಿಯಾಗಲಿದ್ದಾರೆ ಎಂಬುದು ಬಹಳ ಆಸಕ್ತಿದಾಯಕ ವಿಚಾರವಾಗಿದೆ.