ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ನಲ್ಲಿ ಪಾಕಿಸ್ತಾನಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಬೌಲಿಂಗ್ನಲ್ಲಿ ಬಲಿಷ್ಠವಾಗಿದ್ದ ಪಾಕ್ಗೆ ಇಬ್ಬರು ವೇಗಿಗಳು ಮುಂದಿನ ಪಂದ್ಯಕ್ಕೆ ಅಲಭ್ಯ ಆಗಿರಲಿದ್ದಾರೆ. ಪಾಕ್ನ ಸ್ಪಿಂಗ್ ಸೆಷಾಲಿಸ್ಟ್ ನಸೀಮ್ ಶಾ ಏಷ್ಯಾಕಪ್ನಿಂದಲೇ ಹೊರಬಿದ್ದಿದ್ದಾರೆ. ನಸೀಮ್ ಶಾ ಬದಲಿಗೆ ಬಲಗೈ ವೇಗದ ಬೌಲರ್ ಜಮಾನ್ ಖಾನ್ ಸ್ಥಾನ ಪಡೆದಿದ್ದಾರೆ.
ಭಾರತ ವಿರುದ್ಧದ ಪಂದ್ಯದ ವೇಳೆ ನಸೀಮ್ ಬಲ ಭುಜದ ಗಾಯಕ್ಕೆ ತುತ್ತಾಗಿದ್ದಾರೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಮನದಲ್ಲಿಟ್ಟುಕೊಂಡು ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿರುವ ತಂಡದ ವೈದ್ಯಕೀಯ ಸಮಿತಿಯು ನಸೀಮ್ ಅವರನ್ನು ಮೇಲ್ವಿಚಾರಣೆ ಮಾಡಲಿದೆ. ಜಮಾನ್ ಖಾನ್ ಟಿ20 ಮಾದರಿಯಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ. ಪಾಕಿಸ್ತಾನ ಆಡಿರುವ ಆರು ಟಿ-20ಯಲ್ಲಿ 6.66ರ ಎಕಾನಮಿಯಲ್ಲಿ 32.5 ರ ಸರಾಸರಿಯಲ್ಲಿ ನಸೀಮ್ ನಾಲ್ಕು ವಿಕೆಟ್ ಪಡೆದಿದ್ದಾರೆ.
ರೌಫ್ ಕೂಡಾ ಗಾಯಾಳು:ಭಾರತದ ವಿರುದ್ಧ ಭಾನುವಾರ ಬೌಲಿಂಗ್ ಮಾಡಿದ್ದ ಮಹಮ್ಮದ್ ರೌಫ್ ಸೋಮವಾರ ಪಕ್ಕೆಲುಬಿನ ನೋವಿನ ಕಾರಣಕ್ಕೆ ಮೈದಾನಕ್ಕಿಳಿದಿರಲಿಲ್ಲ. ಅವರ ಬದಲಿಗೆ ಇಫ್ತಿಕರ್ ಅಹಮ್ಮದ್ ಬೌಲಿಂಗ್ ಮಾಡಿದ್ದರು. ರೌಫ್ ಸಹ ತಂಡದ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ನಾಳಿನ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಹೇಳುವುದು ಅನುಮಾನ ಆಗಿದೆ.
ಏಷ್ಯಾಕಪ್ನಲ್ಲಿ ಪಾಕ್ಗೆ ಹಿನ್ನಡೆ?:ಬಾಂಗ್ಲಾ ಮೇಲೆ ಗೆದ್ದು ಭಾರತದ ವಿರುದ್ಧ ಸೋಲು ಕಂಡಿರುವ ಪಾಕಿಸ್ತಾನ ನಾಳೆ ಶ್ರೀಲಂಕಾದ ವಿರುದ್ಧ ಆಡಬೇಕಿದೆ. ಏಷ್ಯಕಪ್ ಫೈನಲ್ಗೆ ಪ್ರವೇಶ ಪಡೆಯಲು ಪಾಕಿಸ್ತಾನ ಮತ್ತು ಶ್ರೀಲಂಕಾಗೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡ ಇದೆ. ಹೀಗಾಗಿ ನಾಳಿನ ಪಂದ್ಯವನ್ನು ಏಷ್ಯಾಕಪ್ನ ಸೆಮಿಫೈನಲ್ ಎಂದೇ ಕರೆಯಲಾಗುತ್ತಿದೆ. ಈ ಪ್ರಮುಖ ಪಂದ್ಯದಲ್ಲಿ ಪಾಕ್ನ ಸ್ಟಾರ್ ಬೌಲರ್‌ಗಳು ಆಡದಿರುವುದು ತಂಡಕ್ಕೆ ಹಿನ್ನಡೆ ಆಗಲಿದೆ.
ಪಿಸಿಬಿ ಪ್ರಕಟಣೆ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಸೀಮ್ ಅನುಪಸ್ಥಿತಿಯನ್ನು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದೆ, "ನಡೆಯುತ್ತಿರುವ ಪುರುಷರ ಏಕದಿನ ಏಷ್ಯಾಕಪ್ 2023ಕ್ಕೆ ಪಾಕಿಸ್ತಾನದ 17 ಆಟಗಾರರ ತಂಡದಲ್ಲಿ ಬಲಗೈ ವೇಗದ ಬೌಲರ್ ಜಮಾನ್ ಖಾನ್, ನಸೀಮ್ ಶಾ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ. ಜಮಾನ್ ಇಂದು ಬೆಳಗ್ಗೆ ತಂಡವನ್ನು ಸೇರಿಕೊಂಡಿದ್ದು, ಸಂಜೆ ತಂಡದೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿರುವ ತಂಡದ ವೈದ್ಯಕೀಯ ಸಮಿತಿಯು ಅವರನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಎಂದು ತಿಳಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮೀಸಲು ದಿನದಂದು ಭಾರತದ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ಓವರ್ ಬೌಲ್ ಮಾಡದ ಅನುಭವಿ ವೇಗಿ ಹ್ಯಾರಿಸ್ ರೌಫ್ ಗುರುವಾರ ಶ್ರೀಲಂಕಾ ಪಂದ್ಯವನ್ನು ಆಡುವುದು ಅನುಮಾನವಾಗಿದೆ. "ರೌಫ್ ಅವರ ಬಲ ಪಾರ್ಶ್ವದಲ್ಲಿ ನೋವು ಅನುಭವಿಸುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ವೇಗದ ಬೌಲರ್‌ಗಳು ನಮ್ಮ ಆಸ್ತಿ ಮತ್ತು ತಂಡದ ವೈದ್ಯಕೀಯ ಸಮಿತಿಯು ಎಲ್ಲ ಪ್ರಮುಖ ವಿಶ್ವಕಪ್‌ಗೆ ಮುಂಚಿತವಾಗಿ ಅವರಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆ ಒದಗಿಸುತ್ತದೆ ಎಂದು ತಂಡದ ವೈದ್ಯ ಸೊಹೈಲ್ ಸಲೀಮ್ ತಿಳಿಸಿರುವುದಾಗಿ ಪಿಸಿಬಿ ಉಲ್ಲೇಖಿಸಿದೆ. (ಪಿಟಿಐ)
ಇದನ್ನೂ ಓದಿ:ಏಷ್ಯಾಕಪ್ನಲ್ಲಿ 9 ವಿಕೆಟ್ ಕಬಳಿಸಿದ ಟಾಪ್ ಬೌಲರ್ ಕುಲದೀಪ್.. ಲಂಕಾ ವಿರುದ್ಧದ ವಿಶೇಷ ಮೈಲಿಗಲ್ಲು ತಲುಪಿದ ಚೈನಾಮನ್ ಸ್ಪಿನ್ನರ್