ಕರ್ನಾಟಕ

karnataka

ETV Bharat / sports

ಐಸಿಸಿ ಟಿ-20 ವಿಶ್ವಕಪ್ ಹಾಗೂ ನ್ಯೂಜಿಲ್ಯಾಂಡ್​ ಸರಣಿಗೆ ಪಾಕ್​ ತಂಡ ಪ್ರಕಟ - ವಿಶ್ವಕಪ್​ಗೆ ಪಾಕ್​ ತಂಡ ಪ್ರಕಟ

ಮುಂದಿನ ತಿಂಗಳಿಂದ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗೋಸ್ಕರ ಪಾಕ್​ ಕ್ರಿಕೆಟ್​ ಮಂಡಳಿ 15 ಸದಸ್ಯರ ತಂಡ ಪ್ರಕಟಗೊಳಿಸಿದೆ.

Pakistan team
Pakistan team

By

Published : Sep 6, 2021, 3:27 PM IST

ಲಾಹೋರ್​:ನ್ಯೂಜಿಲ್ಯಾಂಡ್​ ಹಾಗೂ ಐಸಿಸಿ ಟಿ-20 ವಿಶ್ವಕಪ್​​ ಟೂರ್ನಿಗೋಸ್ಕರ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. 15 ಆಟಗಾರರಿಗೆ ಪಾಕ್​ ಕ್ರಿಕೆಟ್ ಮಂಡಳಿ(ಪಿಸಿಬಿ) ಮಣೆ ಹಾಕಿದೆ. ಪ್ರಮುಖವಾಗಿ ತಂಡದಲ್ಲಿ ಆಸಿಫ್​ ಅಲಿ ಹಾಗೂ ಖುಷ್ದಿಲ್​ಗೆ ಅವಕಾಶ ದೊರೆತಿದೆ.

ನ್ಯೂಜಿಲ್ಯಾಂಡ್​ ವಿರುದ್ಧ ಸೆಪ್ಟೆಂಬರ್​​ 25ರಿಂದ ಐದು ಪಂದ್ಯಗಳ ಟಿ-20 ಪಂದ್ಯಗಳ ಸರಣಿಯಲ್ಲಿ ಪಾಕ್​ ತಂಡ ಭಾಗಿಯಾಗಲಿದೆ. ಇದಾದ ಬಳಿಕ ಇಂಗ್ಲೆಂಡ್​ ವಿರುದ್ಧ ಎರಡು ಚುಟುಕು ಪಂದ್ಯಗಳ ಸರಣಿಯಲ್ಲೂ ತಂಡ ಪಾಲ್ಗೊಳ್ಳಲಿದೆ. ಇದಾದ ಬಳಿಕ ವಿಶ್ವಕಪ್​ ಸರಣಿಯಲ್ಲಿ ಅಕ್ಟೋಬರ್​​ 24ರಂದು ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೆಣಸಾಟ ನಡೆಸಲಿದೆ.

ಪಾಕ್​ ತಂಡ ಇಂತಿದೆ:

ಬಾಬರ್​ ಆಜಂ (ಕ್ಯಾಪ್ಟನ್​), ಶಬ್ದಾದ್ ಖಾನ್​, ಆಸಿಫ್ ಖಾನ್​, ಆಜಂ ಖಾನ್​, ಹ್ಯಾರಿಸ್​​ ರೌಫ್​, ಹಸನ್​ ಅಲಿ, ಇಮಾದ್​ ವಾಸೀಂ, ಖುಷ್ದಿಲ್​ ಶಾ, ಮೊಹಮ್ಮದ್ ಹಫೀಜ್​, ಮೊಹಮ್ಮದ್​ ಹಸೀನ್​, ಮೊಹಮ್ಮದ್​ ನವಾಜ್​, ಮೊಹಮ್ಮದ್ ರಿಜ್ವಾನ್​, ಮೊಹಮ್ಮದ್​ ವಾಸೀಂ, ಶಾಹೀನ್​ ಶಾ ಆಫ್ರಿದಿ, ಶೋಹಿಬ್​ ಮಾಸೂದ್

ಕೋಚ್‌ ಸ್ಥಾನಕ್ಕೆ ಹೊಸ ಆಯ್ಕೆ

ಪಾಕ್​ ಕ್ರಿಕೆಟ್​ ತಂಡದಮುಖ್ಯ ಕೋಚ್​ ಆಗಿದ್ದ ಮಿಸ್ಬಾ ಉಲ್​ ಹಕ್​ ಹಾಗೂ ಬೌಲಿಂಗ್​ ಕೋಚ್​ ವಕಾರ್​ ಯೂನಿಸ್​ ತಮ್ಮ ಹುದ್ದೆಯಿಂದ ಹಿಂದೆ ಸರಿದಿರುವುದಾಗಿ ಪಾಕ್​ ಕ್ರಿಕೆಟ್ ಮಂಡಳಿ ತಿಳಿಸಿದೆ. ಹೀಗಾಗಿ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗಾಗಿ ಸಕ್ಲೇನ್​ ಮುಷ್ತಾಕ್ ಮತ್ತು ಅಬ್ದುಲ್ ರಜಾಕ್​ ಆಯ್ಕೆಯಾಗಿದ್ದಾರೆ. ಟಿ-20 ವಿಶ್ವಕಪ್​​ನಲ್ಲೂ ತಂಡದ ಕೋಚ್​ ಆಗಿಯೂ ಇವರೇ ಮುಂದುವರೆಯುವ ಸಾಧ್ಯತೆ ಇದೆ.

ಯುಎಇನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗಾಗಿ ಈಗಾಗಲೇ ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ ತಂಡಗಳು ಪ್ರಕಟಗೊಂಡಿದೆ. ಇಂಗ್ಲೆಂಡ್​ ವಿರುದ್ಧದ 4ನೇ ಟೆಸ್ಟ್​ ಪಂದ್ಯ ಮುಕ್ತಾಯದ ಬಳಿಕ ಟೀಂ ಇಂಡಿಯಾ ಸಹ ಘೋಷಣೆಯಾಗಲಿದೆ.

ABOUT THE AUTHOR

...view details