ಕರ್ನಾಟಕ

karnataka

ETV Bharat / sports

ಈ ವರ್ಷ ಏಷ್ಯಾಕಪ್​ ನಡೆಯುವುದೇ ಅನುಮಾನ.. ಅದರ ಬದಲಿ ಯೋಜನೆಗೆ ತಯಾರಾಗಿದೆ ಬಿಸಿಸಿಐ - ETV Bharath Kannada news

ಪಾಕಿಸ್ತಾನ ಪ್ರಸ್ತಾಪ ಮಾಡಿರುವ ಹೈಬ್ರಿಡ್​ ಮಾದರಿಯ ಪಂದ್ಯಾವಳಿಗೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವೂ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Pakistan may pull out of Asia Cup
ಈ ವರ್ಷ ಏಷ್ಯಾಕಪ್​ ನಡೆಯುವುದೇ ಅನುಮಾನ

By

Published : Jun 6, 2023, 6:54 PM IST

ಕರಾಚಿ (ಪಾಕಿಸ್ತಾನ):ಭಾರತ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸುವುದಿಲ್ಲ ಎಂಬ ಕಾರಣಕ್ಕೆ ಏಕದಿನ ಮಾದರಿಯ ಏಷ್ಯಾಕಪ್ ನಡೆಸಲು ಪಾಕಿಸ್ತಾನ ಹೈಬ್ರೀಡ್​ ಮಾದರಿಯನ್ನು ಪ್ರಸ್ತಾಪಿಸಿತ್ತು. ಆದರೆ ಈಗ ಈ ಮಾದರಿಗೆ ಭಾರತದ ಜೊತೆಗೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವೂ ಒಪ್ಪಿಗೆ ನೀಡದಿರುವುದರಿಂದ ಏಷ್ಯಾ ಕಪ್​ನಿಂದ ಪಾಕಿಸ್ತಾನವೇ ಹೊರಗುಳಿಯುವ ಸಾಧ್ಯತೆಗಳಿವೆ.

ಪಾಕಿಸ್ತಾನ ಆಡಳಿತ ಮಂಡಳಿ ಪ್ರಸ್ತಾಪ ಮಾಡಿರುವ 'ಹೈಬ್ರಿಡ್ ಮಾದರಿ'ಯಲ್ಲಿ ಪಾಕಿಸ್ತಾನದಲ್ಲೇ ಕೇವಲ 3 ಅಥವಾ 4 ಪಂದ್ಯಗಳು ನಡೆಯುತ್ತವೆ ಅಷ್ಟೆ. ಹೀಗಾಗಿ ಭಾರತದ ಜೊತೆಗೆ ಹೈಬ್ರಿಡ್ ಮಾದರಿಯನ್ನು ಇತರ ರಾಷ್ಟ್ರಗಳು ಸಹ ವಿರೋಧಿಸಿದೆ ಎನ್ನಲಾಗಿದೆ.

ಭದ್ರತಾ ಕಾರಣಗಳಿಗಾಗಿ ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಈ ಹೈಬ್ರಿಡ್​ ಪಂದ್ಯಗಳನ್ನು ನಡೆಸುವ ಬಗ್ಗೆ ಚರ್ಚೆಗಳು ಆರಂಭವಾದವು. ಆದರೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಪಾಕಿಸ್ತಾನದಿಂದ ಟೂರ್ನಿಯನ್ನು ಸ್ಥಳಾಂತರಿಸುವ ಬಿಸಿಸಿಐನ ಒತ್ತಡವನ್ನು ಬೆಂಬಲಿಸಿದೆ ಎಂಬುದು ಈಗ ಸ್ಪಷ್ಟವಾಗಿದೆ.

"ಏಷ್ಯನ್ ಕ್ರಿಕೆಟ್ ಮಂಡಳಿಯ ಸದಸ್ಯ ರಾಷ್ಟ್ರಗಳ ಔಪಚಾರಿಕ ಸಭೆ ಈ ತಿಂಗಳ ಕೊನೆಯಲ್ಲಿ ನಡೆಯಲಿದೆ. ಆದರೆ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಏಷ್ಯಾ ಕಪ್‌ಗಾಗಿ ತಮ್ಮ ಹೈಬ್ರಿಡ್ ಮಾದರಿಯ ಪ್ರಸ್ತಾಪವನ್ನು ಬೆಂಬಲಿಸುತ್ತಿಲ್ಲ ಎಂದು ಪಿಸಿಬಿಗೆ ಈಗಾಗಲೇ ತಿಳಿದಿದೆ" ಎಂದು ಏಷ್ಯಾಕಪ್​ನ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ.

ಸೇಥಿ ಅವರು ಈಗಾಗಲೇ ತಮ್ಮ ಕ್ರಿಕೆಟ್ ನಿರ್ವಹಣಾ ಸಮಿತಿ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ತವರಿನಲ್ಲಿ ಏಷ್ಯಾಕಪ್‌ನ ಯಾವುದೇ ಪಂದ್ಯಗಳನ್ನು ಆಯೋಜಿಸದಿದ್ದರೆ ಪಾಕಿಸ್ತಾನದ ನಿಲುವಿನ ಬಗ್ಗೆ ಚರ್ಚಿಸಲು ಸಂಬಂಧಿತ ಸರ್ಕಾರಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಒಂದು ತಟಸ್ಥ ದೇಶಕ್ಕೆ ಸ್ಥಳಾಂತರಿಸಿದರೆ, ಪಾಕ್​ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸೇಥಿ ಪದೇ ಪದೇ ಹೇಳುತ್ತಿದ್ದಾರೆ. ಅದರಂತೆ ಪಿಸಿಬಿ ಏಷ್ಯಾಕಪ್‌ನ್ನು ಬಹಿಷ್ಕರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಿ ಅಥವಾ ಹಿಂತೆಗೆದುಕೊಳ್ಳಿ ಎಂದು ಪಾಕಿಸ್ತಾನಕ್ಕೆ ಕೇವಲ ಎರಡು ಆಯ್ಕೆಗಳನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನೀಡಿದೆ. ಒಂದು ವೇಳೆ ಪಾಕಿಸ್ತಾನ ಆಡದಿದ್ದಲ್ಲಿ ಅದನ್ನು ಏಷ್ಯಾಕಪ್ ಎಂದು ಕರೆಯಲಾಗುತ್ತದೆ. ಆದರೆ ಪಾಕಿಸ್ತಾನದ ಅನುಪಸ್ಥಿತಿಯಲ್ಲಿ ಪ್ರಸಾರಕರ ಜೊತೆಗಿನ ಒಪ್ಪಂದವನ್ನು ಹೊಂದಿಕೆ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ. ಏಷ್ಯಾ ಕಪ್​ನ ಪಂದ್ಯಗಳಿಗೆ ಭಾರತ ಪಾಕಿಸ್ತಾನಕ್ಕೆ ಪ್ರವಾಸ ಮಾಡದಿರುವ ಕಾರಣ ಬೇರೆ ದೇಶದಲ್ಲಿ ಪಂದ್ಯಗಳನ್ನು ನಡೆಸಲು ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಒಪ್ಪಿಗೆ ನೀಡಿವೆ ಎಂದು ಮೂಲಗಳು ತಿಳಿಸಿವೆ.

ಏಷ್ಯಾ ಕಪ್​ ಪಂದ್ಯಗಳು ನಡೆಯುವುದು ಬಹುತೇಕ ಅನುಮಾನವಾಗಿದೆ ಅದಕ್ಕೆ ಕಾರಣ ಭಾರತ ಮತ್ತು ಪಾಕಿಸ್ತಾನ ಆಡದಿದ್ದಲ್ಲಿ ಪ್ರಸಾರಕರು ಒಪ್ಪಂದಗಳನ್ನು ಒಪ್ಪುದಿಲ್ಲ. ಹೀಗಾಗಿ ಈ ವರ್ಷ ಏಷ್ಯಾಕಪ್ ಸಂಪೂರ್ಣವಾಗಿ ರದ್ದಾದಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ವಿಶ್ವಕಪ್‌ಗೆ ಮೊದಲು 50 ಓವರ್‌ಗಳ ಸ್ವರೂಪದಲ್ಲಿ ಬಹು-ತಂಡದ ಈವೆಂಟ್‌ನಲ್ಲಿ ನಡೆಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮಾಹಿತಿ ಬಂದಿದೆ.

ಇದನ್ನೂ ಓದಿ:ರೋಹಿತ್​ ಶರ್ಮಾ ಎಡಗೈಗೆ ಗಾಯ: ಇಂಜುರಿ ಭಯದಲ್ಲಿ ಅಭ್ಯಾಸದಿಂದ ದೂರ ಉಳಿದ ಆಟಗಾರರು

ABOUT THE AUTHOR

...view details