ಕರ್ನಾಟಕ

karnataka

ETV Bharat / sports

ಅಫ್ಘಾನಿಸ್ತಾನ ನೂತನ ಬೌಲಿಂಗ್​ ಕೋಚ್ ಆಗಿ ಉಮರ್​ ಗುಲ್  ನೇಮಕ - Former Pakistan pacer Umar Gul

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದ ಮಾಜಿ ಬೌಲರ್​ ಉಮರ್​ ಗುಲ್​ ಅವರನ್ನು ಅಂತಾರಾಷ್ಟ್ರೀಯ ಪುರುಷರ ಕ್ರಿಕೆಟ್​ ತಂಡದ ಬೌಲಿಂಗ್​ ಕೋಚ್​ ಆಗಿ ನೇಮಿಸಿದೆ.

Pakistan legend Umar Gul joins Afghanistan as bowling coach
ಉಮರ್​ ಗುಲ್​ ಅಫ್ಘಾನಿಸ್ತಾನ ನೂತನ ಬೌಲಿಂಗ್​ ಕೋಚ್ ಆಗಿ ನೇಮಕ

By

Published : May 25, 2022, 11:02 PM IST

ಕಾಬೂಲ್​: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪಾಕಿಸ್ತಾನದ ಮಾಜಿ ಆಟಗಾರ ಉಮರ್ ಗುಲ್ ಅವರನ್ನು ರಾಷ್ಟ್ರೀಯ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ ಎಂದು ಬುಧವಾರ ಪ್ರಕಟಿಸಿದೆ. ಜೂನ್​ನಲ್ಲಿ ಅಫ್ಘಾನಿಸ್ತಾನವು ಜಿಂಬಾಬ್ವೆ ಪ್ರವಾಸವನ್ನು ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಕೋಚ್​ ಆಗಿ ಕಾರ್ಯ ನೀರ್ವಹಿಸಲಿದ್ದಾರೆ.

ಏಪ್ರಿಲ್‌ನಲ್ಲಿ ಅಬುಧಾಬಿಯಲ್ಲಿ ನಡೆದ ತಂಡದ ತರಬೇತಿ ಮತ್ತು ತಯಾರಿ ಶಿಬಿರದ ಸಮಯದಲ್ಲಿ ಗುಲ್ ಅವರನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಬೌಲಿಂಗ್ ಸಲಹೆಗಾರರನ್ನಾಗಿ ನೇಮಿಸಿತ್ತು. ಪಾಕಿಸ್ತಾನ ತಂಡದ ಮಾಜಿ ಸಹ ಆಟಗಾರ ಯೂನಿಸ್ ಖಾನ್ ಶಿಬಿರಕ್ಕೆ ಬ್ಯಾಟಿಂಗ್ ಸಲಹೆಗಾರರಾಗಿದ್ದರು.

ನೀಳ ಕಾಯದ 39 ವರ್ಷದ ಉಮರ್​ ಗುಲ್​ ಪಾಕಿಸ್ತಾನ ತಂಡದಲ್ಲಿ ಬಿಳಿ ಚೆಂಡಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಅವರು ಪಾಕಿಸ್ತಾನ ತಂಡದಿಂದ ಒಟ್ಟು 237 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 130 ಏಕದಿನ ಪಂದ್ಯಗಳನ್ನಾಡಿರುವ ಅವರು 179 ವಿಕೆಟ್​ಗಳನ್ನು ಪಡೆದಿದ್ದಾರೆ. 60 ಟಿ - 20 ಪಂದ್ಯದಲ್ಲಿ 85 ವಿಕೆಟ್​ ಗಳಿಸಿದ್ದಾರೆ. ಪಾಕಿಸ್ತಾನದ ಪರ 2007 ಮತ್ತು 2009ರ ಐಸಿಸಿ ಟಿ 20 ವಿಶ್ವ ಕಪ್​ನಲ್ಲಿ ಪ್ರಮುಖ ವಿಕೆಟ್​​​ ಟೇಕಿಂಗ್​ ಬೌಲರ್ ಆಗಿದ್ದರು.

ಧನ್ಯವಾದ ತಿಳಿಸಿದ ಉಮರ್​ ಗುಲ್​:ಅಫ್ಘಾನಿಸ್ತಾನ ತಂಡದೊಂದಿಗೆ ಮತ್ತೆ ಆಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ಗಲ್​ ತಮ್ಮ ಟ್ವೀಟ್​​ ಖಾತೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ:LSG vs RCB: ರಜತ್​ ಅಬ್ಬರದ ಶತಕ... ಲಖನೌ ಗೆಲುವಿಗೆ 208 ರನ್​ಗಳ ಬೃಹತ್​ ಟಾರ್ಗೆಟ್​

ABOUT THE AUTHOR

...view details