ಕರಾಚಿ :ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 148 ರನ್ಗಳಿಗೆ ಸರ್ವಪತನಗೊಂಡು ಬರೋಬ್ಬರಿ 408 ರನ್ಗಳ ಇನ್ನಿಂಗ್ಸ್ ಮುನ್ನಡೆ ಅನುಭವಿಸಿದೆ.
2ನೇ ಟೆಸ್ಟ್ನಲ್ಲಿ ಯಶಸ್ವಿಯಾಗಿ ಎರಡು ದಿನ ಬ್ಯಾಟಿಂಗ್ ಮಾಡಿ 505 ರನ್ಗಳಿಸಿದ್ದ ಪ್ರವಾಸಿ ಆಸ್ಟ್ರೇಲಿಯಾ ತಂಡ 3ನೇ ದಿನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 556ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿತು.
ಮೊದಲ ದಿನ ಆಸ್ಟ್ರೇಲಿಯಾ ತಂಡ 3 ವಿಕೆಟ್ ಕಳೆದುಕೊಂಡು 251 ರನ್ಗಳಿಸಿತ್ತು. 2ನೇ ದಿನವೂ ಸಂಪೂರ್ಣ ಬ್ಯಾಟಿಂಗ್ ಮಾಡಿದ ಆಸೀಸ್ ತಂಡ 9 ವಿಕೆಟ್ ಕಳೆದುಕೊಂಡು 505 ರನ್ಗಳಿಸಿತ್ತು. ಇಂದು ಆ ಮೊತ್ತಕ್ಕೆ 51 ರನ್ ಸೇರಿಸಿತ್ತು. ಉಸ್ಮಾನ್ ಖವಾಜ 160, ಅಲೆಕ್ಸ್ ಕ್ಯಾರಿ 92, ಸ್ಟೀವ್ ಸ್ಮಿತ್ 72 ರನ್ಗಳಿಸಿದ್ದರು.
ಆಸ್ಟ್ರೇಲಿಯಾದ ಬೃಹತ್ ಮೊತ್ತವನ್ನು ಹಿಂಬಾಲಿಸಿದ ಪಾಕಿಸ್ತಾನ ತಂಡ ಕೆಟ್ಟದಾಗಿ ಬ್ಯಾಟ್ ಬೀಸಿ ನಿರಂತರ ವಿಕೆಟ್ ಕಳೆದುಕೊಂಡಿತು. ಆಸೀಸ್ ಬೌಲರ್ಗಳ ಮುಂದೆ ಯಾವುದೇ ಹಂತದಲ್ಲೂ ತಿರುಗೇಟು ನೀಡುವುದಕ್ಕೆ ಸಾಧ್ಯವಾಗಲಿಲ್ಲ.
ನಾಯಕ ಬಾಬರ್ ಅಜಮ್ ಸಿಡಿಸಿದ 36 ರನ್ ತಂಡದ ಗರಿಷ್ಠ ಮೊತ್ತ ಎನಿಸಿತು. ನೌಮನ್ ಅಲಿ 20, ಇಮಾಮ್ ಉಲ್ ಹಕ್(20) ಮಾತ್ರ ತಂಡದಲ್ಲಿ 20ರ ಗಡಿ ದಾಟಿದರು.