ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್ ಮಾಡುತ್ತಿದ್ದಾಗ ಎದೆ ನೋವು : ಪಾಕ್‌ ಕ್ರಿಕೆಟರ್​ ಆಸ್ಪತ್ರೆಗೆ ದಾಖಲು - ಆಸ್ಪತ್ರೆಗೆ ದಾಖಲಾದ ಪಾಕಿಸ್ತಾನಿ ಬ್ಯಾಟರ್ ಅಬೀದ್ ಅಲಿ

ಟೂರ್ನಮೆಂಟ್​ನಲ್ಲಿ ಅಬೀದ್​ ಸೆಂಟ್ರಲ್ ಪಂಜಾಬ್​ ತಂಡದಲ್ಲಿ ಆಡುತ್ತಿದ್ದರು. ಸೋಮವಾರ ಪಂದ್ಯದ ನಡುವೆ ಎರಡು ಬಾರಿ ಎದೆ ನೋವು ಎಂದು ತಿಳಿಸಿದ ನಂತರ ಟೀಮ್ ಮ್ಯಾನೇಜರ್​ ಆಶ್ರಪ್ ಅಲಿ ವೈದ್ಯಕೀಯ ಪರೀಕ್ಷೆಗೆ ದಾಖಲಿಸಲು ನಿರ್ಧರಿಸಿದರು. ಪ್ರಸ್ತುತ ಅಬೀದ್​ ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ..

Pakistan cricketer hospitalised after pain in chest
ಪಾಕಿಸ್ತಾನ ಕ್ರಿಕೆಟರ್​ ಅಬೀದ್ ಅಲಿ ಆಸ್ಪತ್ರೆಗೆ ದಾಖಲು

By

Published : Dec 21, 2021, 5:57 PM IST

ಕರಾಚಿ :ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ರನ್​ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಪಾಕಿಸ್ತಾನ ಆರಂಭಿಕ ಬ್ಯಾಟರ್​ ಅಬೀದ್ ಅಲಿ ಕುವೈದ್ ಎ ಟ್ರೋಫಿಯ ಪಂದ್ಯದಲ್ಲಿ ಆಡುವಾಗ ಎದೆನೋವು ಕಾಣಿಸಿದ ಹಿನ್ನೆಲೆ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೂರ್ನಮೆಂಟ್​ನಲ್ಲಿ ಅಬೀದ್​ ಸೆಂಟ್ರಲ್ ಪಂಜಾಬ್​ ತಂಡದಲ್ಲಿ ಆಡುತ್ತಿದ್ದರು. ಸೋಮವಾರ ಪಂದ್ಯದ ನಡುವೆ ಎರಡು ಬಾರಿ ಎದೆ ನೋವು ಎಂದು ತಿಳಿಸಿದ ನಂತರ ಟೀಂ ಮ್ಯಾನೇಜರ್​ ಆಶ್ರಪ್ ಅಲಿ ವೈದ್ಯಕೀಯ ಪರೀಕ್ಷೆಗೆ ದಾಖಲಿಸಲು ನಿರ್ಧರಿಸಿದರು. ಪ್ರಸ್ತುತ ಅಬೀದ್​ ವೈದ್ಯರ ವೀಕ್ಷಣೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗ ಪಾಕಿಸ್ತಾನ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ವೇಳೆ ಅಬೀದ್​ 3 ಇನ್ನಿಂಗ್ಸ್​ಗಳಲ್ಲಿ 263 ರನ್​ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 9000 ರನ್​ ಪೂರೈಸಿದ್ದಾರೆ. ಪಾಕಿಸ್ತಾನ ಪರ 16 ಪಂದ್ಯಗಳಿಂದ 1180 ರನ್​ಗಳಿಸಿದ್ದಾರೆ.

ಇದನ್ನೂ ಓದಿ:ಹರಿಣಗಳಿಗೆ ಆಘಾತ: ಭಾರತ ಟೆಸ್ಟ್​ ಸರಣಿಯಿಂದ ಎನ್ರಿಚ್​ ನಾರ್ಕಿಯಾ ಔಟ್

ABOUT THE AUTHOR

...view details