ಚಟ್ಟೋಗ್ರಾಮ್ :ಮೊದಲ ಇನ್ನಿಂಗ್ಸ್ನಲ್ಲಿ 44 ರನ್ಗಳ ಇನ್ನಿಂಗ್ಸ್ ಹಿನ್ನಡೆಯ ಹೊರತಾಗಿಯೂ ಪಾಕಿಸ್ತಾನ 8 ವಿಕೆಟ್ಗಳಿಂದ ಅತಿಥೇಯ ಬಾಂಗ್ಲಾದೇಶವನ್ನು ಮಣಿಸಿ 1-0 ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿದೆ.
ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಲಿಟನ್ ದಾಸ್(114) ಶತಕದ ನೆರವಿನಿಂದ 330 ರನ್ಗಳಿಸಿದರೆ. ಇದಕ್ಕುತ್ತರವಾಗಿ ಪಾಕಿಸ್ತಾನ 286 ರನ್ಗಳಿಸಿ 44 ರನ್ಗಳ ಹಿನ್ನಡೆ ಅನುಭವಿಸಿತ್ತು. ಆರಂಭಿಕ ಅಬೀದ್ ಅಲಿದ್ 133 ರನ್ಗಳಿಸಿದ್ದರು. ಬಾಂಗ್ಲಾದೇಶ ಪರ ತಆಜುಲ್ ಇಸ್ಲಾಮ್ 7 ವಿಕೆಟ್ ಪಡೆದು ಮಿಂಚಿದ್ದರು.
ಇನ್ನು 44 ರನ್ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಶಾಹೀನ್ ಅಫ್ರಿದಿ ದಾಳಿಗೆ ತತ್ತರಿಸಿ ಕೇವಲ 157ಕ್ಕೆ ಆಲೌಟ್ ಆಗಿ ಪಾಕ್ಗೆ ಕೇವಲ 202 ರನ್ಗಳ ಸಾಧಾರಣ ಗುರಿ ನೀಡಿತ್ತು.