ಲಾಹೋರ್(ಪಾಕಿಸ್ತಾನ): ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೋಲನುಭವಿಸಿದ ಪಾಕ್ ಎರಡನೇ ಪಂದ್ಯದಲ್ಲಿ ಅಬ್ಬರಿಸಿದ್ದು, ನಾಯಕ ನಾಯಕ ಬಾಬರ್ ಅಜಂ ಮತ್ತು ಇಮಾಮ್ ಉಲ್ ಹಕ್ ಶತಕದಾಟವಾಡಿದರು.
ಲಾಹೋರ್‌ನ ಗದಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸೀಸ್ ತಂಡ ಬೆನ್ ಮೆಕ್ಡರ್ಮೊಟ್ 104, ಟ್ರಾವಿಸ್ ಹೆಡ್ 89, ಮರ್ನಸ್ ಲ್ಯಾಬುಸ್ಚಾಗ್ನೆ 59 ರನ್ಗಳ ನೆರವಿನಿಂದ ಎಲ್ಲಾ ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತ್ತು. ಈ ಸ್ಕೋರ್ ಬೆನ್ನತ್ತಿದ ಪಾಕ್ ತಂಡ ಕೇವಲ 49 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿ, ರೋಚಕ ಗೆಲುವು ದಾಖಲಿಸಿತು.