ಶಾರ್ಜಾ: ಸ್ಕಾಟ್ಲೆಂಡ್ ವಿರುದ್ಧ 72 ರನ್ಗಳಿಂದ ಗೆಲ್ಲುವ ಮೂಲಕ ಪಾಕಿಸ್ತಾನ ತಂಡ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದೆ. ನವೆಂಬರ್ 11ರಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಭಾನುವಾರ ನಡೆದ ತನ್ನ ಕೊನೆಯ ಸೂಪರ್ 12 ಲೀಗ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು. ಬಾಬರ್ ಅಜಮ್ 66 ರನ್ಗಳಿಸಿದರೆ, ಶೋಯಬ್ ಮಲಿಕ್ 18 ಎಸೆತಗಳಲ್ಲಿ ಅಜೇಯ 54 ಮತ್ತು ಹಫೀಜ್ 19 ಎಸೆತಗಳಲ್ಲಿ 31 ರನ್ಗಳಿಸಿದ್ದರು.
190ರ ನ್ಗಳ ಬೃಹತ್ ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 117 ರನ್ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.