ಪರ್ತ್ (ಆಸ್ಟ್ರೇಲಿಯಾ):ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ನೆದರ್ಲೆಂಡ್ ತಂಡವನ್ನು ಪಾಕಿಸ್ತಾನ ತಂಡ ಆರು ವಿಕೆಟ್‌ಗಳಿಂದ ಮಣಿಸಿದೆ. ಈ ಮೂಲಕ ಭಾರತ ಮತ್ತು ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡಿದ್ದ ಪಾಕ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೆಲುವನ್ನು ದಾಖಲಿಸಿತು. ಮತ್ತೊಂದು ಗಮನಾರ್ಹ ಎಂದರೆ ಆಸ್ಟ್ರೇಲಿಯಾ ನೆಲದಲ್ಲೇ ಮೊದಲ ಟಿ20 ಪಂದ್ಯವನ್ನು ಪಾಕ್ ಗೆದ್ದಂತಾಗಿದೆ.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನೆದರ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 ರನ್ಗಳ ಪೇರಿಸಿತ್ತು. ಕಾಲಿನ್ ಅಕರ್ಮನ್ 27 ರನ್ ಗಳಿಸಿದರೆ, ನಾಯಕ ಸ್ಕಾಟ್ ಎಡ್ವರ್ಡ್ಸ್ 15 ರನ್ ಸಿಡಿಸಿದರು. ಉಳಿದ ಯಾವ ಆಟಗಾರ ಕೂಡ ಒಂದಂಕಿ ರನ್ ಗಡಿ ದಾಟಲಿಲ್ಲ.
ಪಾಕ್ ಪರವಾಗಿ ಶಾದಾಬ್ ಖಾನ್ 22 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನದ ಅತ್ಯಂತ ಯಶಸ್ವಿ ಬೌಲರ್ ಆದರು. ಮೊಹಮ್ಮದ್ ವಾಸಿಂ 2 ವಿಕೆಟ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್ ತಲಾ ಒಂದು ವಿಕೆಟ್ ಪಡೆದರು.
ನೆದರ್ಲೆಂಡ್ ನೀಡಿದ್ದ ಸಾಧಾರಣ ಗೆಲುವಿನ ಗುರಿ ಬೆನ್ನಟ್ಟಿದ್ದ ಪಾಕ್ 3.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 95 ಬಾರಿಸಿ ಗೆಲುವಿನ ನಗೆ ಬೀರಿತು. ಪಾಕ್ ಪರವಾಗಿ ಮೊಹಮ್ಮದ್ ರಿಜ್ವಾನ್ 49 ರನ್, ಫಖರ್ ಜಮಾನ್ 20 ರನ್, ಶಾನ್ ಮಸೂದ್ 12 ರನ್ ಬಾರಿಸಿದರು. ನೆದರ್ಲೆಂಡ್ ಪರ ಬ್ರಾಂಡನ್ ಗ್ಲೋವರ್ 2 ವಿಕೆಟ್ ಮತ್ತು ಪೌಲ್ ವಾನ್ ಮಿಕ್ರಾನ್ 1 ವಿಕೆಟ್ ಪಡೆದರು.
ಇದನ್ನೂ ಓದಿ:ಗೆಲುವಿನ ಅಂಚಿನಲ್ಲಿ ಬಾಂಗ್ಲಾಗೆ ಶರಣಾದ ಜಿಂಬಾಬ್ವೆ: ಮತ್ತೊಂದು ಅಚ್ಚರಿ 3 ರನ್ನಿಂದ ಮಿಸ್