ದುಬೈ:ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಪಾಕಿಸ್ತಾನ ತಂಡ ಭರ್ಜರಿ ಜಯ ಗಳಿಸಿದೆ. ಕ್ರಿಕೆಟ್ ಶಿಶುವಾದ ಹಾಂಕಾಂಗ್ ತಂಡವನ್ನು ಕೇವಲ 38 ರನ್ಗಳಿಗೆ ಪಾಕ್ ಬೌಲರ್ಗಳು ಆಲೌಟ್ ಮಾಡಿದ್ದಾರೆ. ಈ ಮೂಲಕ 155 ರನ್‌ಗಳ ದೊಡ್ಡ ಅಂತರದಿಂದ ಗೆಲುವು ಸಾಧಿಸಿ, ಸೂಪರ್ 4 ಹಂತಕ್ಕೆ ಲಗ್ಗೆ ಹಾಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ ಕೇವಲ 2 ವಿಕೆಟ್ನಷ್ಟಕ್ಕೆ 193 ರನ್ಗಳನ್ನು ಕಲೆ ಹಾಕಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಹಾಂಕಾಂಗ್ ತಂಡ 38 ರನ್ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಯಾವೊಬ್ಬ ಆಟಗಾರರ ಕೂಡ ಎರಡಂಕಿ ಬಾರಿಸಲು ಸಾಧ್ಯವಾಗಲಿಲ್ಲ. 10.4 ಓವರ್ಗಳಲ್ಲಿ ಎಲ್ಲ ವಿಕೆಟ್ಗಳನ್ನು ಹಾಂಕಾಂಗ್ ಆಟಗಾರರು ಒಪ್ಪಿಸಿದರು.