ಕರ್ನಾಟಕ

karnataka

ETV Bharat / sports

ಟಿ20 ಸರಣಿ: ಫಖರ್ ಝಮಾನ್ ಅರ್ಧಶತಕ ಬಲ, ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆದ್ದ ಪಾಕಿಸ್ತಾನ - ಬಾಂಗ್ಲಾದೇಶದ vs ಪಾಕಿಸ್ತಾನ ಟಿ20

109ರನ್​ಗಳ ಸಾಧಾರಣ ಗುರಿಯನ್ನು ಪಾಕ್ ತಂಡ 18.1 ಓವರ್​ಗಳಲ್ಲಿ ಇನ್ನು 11 ಎಸೆತಗಳಿರುವಂತೆ ಗುರಿ ತಲುಪಿ ಸರಣಿಯನ್ನು(seal the series) ವಶಪಡಿಸಿಕೊಂಡಿತು. ಮೊಹಮ್ಮದ್ ರಿಜ್ವಾನ್ 45 ಎಸೆತಗಳಲ್ಲಿ 39 ಹಾಗೂ ಫಖರ್ ಝಮಾನ್ 51 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ ಅಜೇಯ 57 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Pakistan beat Bangladesh by 8 wickets to seal the series
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆದ್ದ ಪಾಕಿಸ್ತಾನ

By

Published : Nov 20, 2021, 6:02 PM IST

ಢಾಕಾ: ಫಖರ್ ಝಮಾನ್ ಅರ್ಧಶತಕ ಮತ್ತು ಬೌಲರ್​ಗಳ ಸಂಘಟಿತ ದಾಳಿಯ ನೆರವಿನಿಂದ ಅತಿಥೇಯ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್​ಗಳ ಜಯ(Pak beats Bangladesh) ಸಾಧಿಸಿ, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಟಿ20 ಸರಣಿಯನ್ನು(Pakistan won the t20 series) ವಶಪಡಿಸಿಕೊಂಡಿದೆ.

ಡಾಕಾದ ಶೇರ್​ ಎ ಬಾಂಗ್ಲಾ ನ್ಯಾಷನಲ್​ ಸ್ಟೇಡಿಯಂನಲ್ಲಿ(Sher-e Bangla National Stadium) ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯ ಬಾಂಗ್ಲಾದೇಶ ತಂಡ ನಿರಾಶದಾಯಕ ಬ್ಯಾಟಿಂಗ್ ಪ್ರದರ್ಶನ ತೋರಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 108 ರನ್​ಗಳಿಸಿತು.

ನಜ್ಮುಲ್ ಹೊಸೇನ್ ಶಂಟೋ 34 ಎಸೆತಗಳಲ್ಲಿ 5 ಬೌಂಡರಿ ಸಹಿತ 40 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಫೀಫ್ ಹೊಸೇನ್ 20 ರನ್​ಗಳಿಸಿದರು. ನಾಯಕ ಮಹಮುಲ್ಲಾ(12) ಸೇರಿದಂತೆ ಬೇರೆ ಯಾವುದೇ ಬ್ಯಾಟರ್​ಗಳು 20 ರ ಗಡಿದಾಟುವಲ್ಲಿ ವಿಫಲರಾದರು.

ಪಾಕಿಸ್ತಾನದ ಪರ ಶಹೀನ್ ಶಾ ಅಫ್ರಿದಿ 15ಕ್ಕೆ2, ಮೊಹಮ್ಮದ್ ವಾಸೀಮ್ 9ಕ್ಕೆ1, ಶದಬ್ ಖಾನ್ 22ಕ್ಕೆ2, ಹ್ಯಾರೀಸ್ ರವೂಫ್ 13ಕ್ಕೆ1 ವಿಕೆಟ್​ ಪಡೆದರು.

ಇನ್ನು 109ರನ್​ಗಳ ಸಾಧಾರಣ ಗುರಿಯನ್ನು ಪಾಕ್ ತಂಡ 18.1 ಓವರ್​ಗಳಲ್ಲಿ ಇನ್ನು 11 ಎಸೆತಗಳಿರುವಂತೆ ಗುರಿ ತಲುಪಿ ಸರಣಿಯನ್ನು(seal the series) ವಶಪಡಿಸಿಕೊಂಡಿತು. ಮೊಹಮ್ಮದ್ ರಿಜ್ವಾನ್ 45 ಎಸೆತಗಳಲ್ಲಿ 39 ಹಾಗೂ ಫಖರ್ ಝಮಾನ್ 51 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ ಅಜೇಯ 57 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಮೂರನೇ ಪಂದ್ಯ ಸೋಮವಾರ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಶುಕ್ರವಾರ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತ್ತು.

ಇದನ್ನು ಓದಿ:ಮುಷ್ತಾಕ್​ ಅಲಿ: ಕರ್ನಾಟಕಕ್ಕೆ ರೋಚಕ ಜಯ, 3ನೇ ಬಾರಿಗೆ ಫೈನಲ್ ಪ್ರವೇಶ

ABOUT THE AUTHOR

...view details