ಮುಲ್ತಾನ್ (ಪಾಕಿಸ್ತಾನ):ಬುಧವಾರ ಮುಲ್ತಾನ್‌ನಲ್ಲಿ ನಡೆಯಲಿರುವ ನೇಪಾಳ ವಿರುದ್ಧದ ಏಷ್ಯಾ ಕಪ್‌ನ ಆರಂಭಿಕ ಪಂದ್ಯಕ್ಕೆ ಪಾಕಿಸ್ತಾನ ತಮ್ಮ 11 ಆಟಗಾರರ ಹೆಸರನ್ನು ಪ್ರಕಟಿಸಿದೆ. 2023ರ ಏಷ್ಯಾಕಪ್‌ನ ಆರಂಭಿಕ ಪಂದ್ಯದಲ್ಲಿ ನೇಪಾಳವನ್ನು ಎದುರಾಳಿಯಾಗಿರುವ ಪಾಕಿಸ್ತಾನವು ಬ್ಯಾಟಿಂಗ್ಗೆ ಆದ್ಯತೆ ನೀಡಿದಂತೆ ಕಾಣಿಸುತ್ತದೆ.
ಮೂರು ಮುಂಚೂಣಿ ವೇಗದ ಬೌಲರ್ಗಳು ಮತ್ತು ಸ್ಪಿನ್ ಬೌಲ್ ಮಾಡುವ ಮೂವರು ಆಲ್ ರೌಂಡರ್‌ಗಳೊಂದಿಗೆ ಪಾಕಿಸ್ತಾನವು ಬೌಲಿಂಗ್ ಆಯ್ಕೆಗಳನ್ನು ಮಾಡಿಕೊಂಡಿದೆ. ಇದಲ್ಲದೇ ತಂಡದ ಬ್ಯಾಟಿಂಗ್ ಕೂಡ ಬಲಿಷ್ಠವಾಗಿ ಕಾಣುತ್ತಿದೆ. ಕೊಲಂಬೊದಲ್ಲಿ ನಡೆದಿದ್ದ ಅಂತಿಮ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧದ ತಂಡವು ಕೆಲವು ಬದಲಾವಣೆಗಳನ್ನು ಮಾಡಿದೆ.
ಫಖರ್ ಜಮಾನ್ ಮತ್ತು ಇಮಾಮ್-ಉಲ್-ಹಕ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಘಾ ಕಾಣಿಸಿಕೊಳ್ಳಲಿದ್ದಾರೆ. ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಕೂಡ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ವೇಗಿ ದಾಳಿಯಲ್ಲಿ ನಸೀಮ್ ಹೊರತಾಗಿ ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಕಾಣಿಸಿಕೊಳ್ಳಲಿದ್ದಾರೆ. ಶಾದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್, ಸಲ್ಮಾನ್ ಅಘಾ ಸ್ಪಿನ್ ವಿಭಾಗದಲ್ಲಿ ನೆರವಾಗಲಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಅಂತಿಮ ಏಕದಿನ ಪಂದ್ಯವನ್ನು ಕಳೆದುಕೊಂಡ ನಂತರ, ಇಫ್ತಿಕರ್ ಮಧ್ಯಮ ಕ್ರಮಾಂಕಕ್ಕೆ ಮರಳಿದ್ದಾರೆ.
ಪಾಕಿಸ್ತಾನದ 11 ಆಟಗಾರರು:ಬಾಬರ್ ಅಜಮ್ (ಸಿ), ಫಖರ್ ಜಮಾನ್, ಇಮಾಮ್ ಉಲ್ ಹಕ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಘಾ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್.