ಬೆಂಗಳೂರು: ಭಾರತ ತಂಡದ ಭವಿಷ್ಯದ ತಾರೆ ದೇವದತ್ ಪಡಿಕ್ಕಲ್ 2022ರ ಮೆಗಾ ಹರಾಜಿನಲ್ಲಿ 7.75 ಕೋಟಿ ರೂ ಪಡೆಯುವ ಮೂಲಕ ಬಂಪರ್ ಬೆಲೆ ಪಡೆದಿದ್ದಾರೆ. ಕರ್ನಾಟಕ ಯುವ ಆಟಗಾರನನ್ನು ರಾಜಸ್ತಾನ್ ರಾಯಲ್ಸ್ ಖರೀದಿಸಿದೆ.
2019ರ ಹರಾಜಿನಲ್ಲಿ ಕರ್ನಾಟಕದ ಯುವ ಬ್ಯಾಟರ್ನನ್ನು ಆರ್ಸಿಬಿ 20 ಲಕ್ಷ ರೂಗಳಿಗೆ ರಿಟೈನ್ ಮಾಡಿಕೊಂಡಿತ್ತು. ನಂತರ 2021ರ ವರೆಗೆ ರಿಟೈನ್ ಮಾಡಿಕೊಂಡು ಬಂದಿತ್ತು. 2020 ಮತ್ತು 2021ರಲ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದ ಪಡಿಕ್ಕಲ್ 473, 2021ರಲ್ಲಿ 411 ರನ್ಗಳಿಸಿದ್ದರು.
ಮತ್ತೊಬ್ಬ ಮಾಜಿ ಆರ್ಸಿಬಿ ಆಟಗಾರ ಹರ್ಷಲ್ ಪಟೇಲ್ ಕೂಡ ಭರ್ಜರಿ ಮೊತ್ತ ಪಡೆದಿದ್ದಾರೆ. 2021ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮತ್ತೆ ಆರ್ಸಿಬಿಗೆ 10.75 ಕೋಟಿ ರೂ ನೀಡಿ ಖರೀದಿಸಿದೆ. ಕಳೆದ ಆವೃತ್ತಿಯಲ್ಲಿ ಪಟೇಲ್ ಕೇವಲ 20 ಲಕ್ಷ ರೂ ಪಡೆದುಕೊಂಡಿದ್ದರು. 2021ರಲ್ಲಿ 32 ವಿಕೆಟ್ ಪಡೆದುಕೊಂಡಿದ್ದ ಪಟೇಲ್ ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು. ಈ ಪ್ರದರ್ಶನವೇ ಅವರಿಗೆ 20 ಲಕ್ಷ ಮೂಲ ಬೆಲೆಯಿಂದ 10.75 ಕೋಟಿಗೆ ಏರುವಂತೆ ಮಾಡಿದೆ.
ಆರ್ಸಿಬಿ ವಿರಾಟ್ ಕೊಹ್ಲಿಯನ್ನು 15 ಕೋಟಿರೂಗೆ , ಮ್ಯಾಕ್ಸ್ವೆಲ್ರನ್ನು 11 ಕೋಟಿ ಮತ್ತು ಸಿರಾಜ್ರನ್ನು 7 ಕೋಟಿ ರೂ ನೀಡಿ ರಿಟೈನ್ ಮಾಡಿಕೊಂಡಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ನಡೆಯುತ್ತಿರುವ ಹರಾಜಿನಲ್ಲಿ ಆರ್ಸಿಬಿ ಪಟೇಲ್ ಜೊತೆಗೆ ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಫಾಫ್ ಡು ಪ್ಲೆಸಿಸ್ರನ್ನು 7 ಕೋಟಿ ರೂ. ನೀಡಿ ಖರಿದೀಸಿದೆ.
ಇದನ್ನೂ ಓದಿ:IPL 2022 Auction: ಶ್ರೇಯಸ್ ಅಯ್ಯರ್ಗೆ ಬಂಪರ್.. 12.5 ಕೋಟಿ ನೀಡಿದ ಕೆಕೆಆರ್, ಧವನ್ ಪಂಜಾಬ್ ಪಾಲು