ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​​ಗೆ ಜಯ ತಂದಿಟ್ಟ 'ಜೋ ರೂಟ್​'.. ಈ ರೀತಿಯಾಗಿ ಟ್ವೀಟ್ ಮಾಡಿದ ಚಿದಂಬರಂ! - ರೂಟ್ ಹೊಗಳಿದ ಚಿದಂಬರಂ

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ರೂಟ್​ ಮಹತ್ವದ ಪಾತ್ರ ನಿರ್ವಹಿಸಿದ್ದು, ಇದಕ್ಕೆ ಕಾಂಗ್ರೆಸ್ ಮುಖಂಡ ಚಿದಂಬರಂ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Chidambaram Tweets on Joe Root
Chidambaram Tweets on Joe Root

By

Published : Jun 6, 2022, 9:26 AM IST

ನವದೆಹಲಿ:ಆತಿಥೇಯ ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್​ ವಿರುದ್ಧ ಐದು ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಟೆಸ್ಟ್​ ಸರಣಿಯಲ್ಲಿ 1-0 ಅಂತರದಿಂದ ಗೆಲುವು ದಾಖಲು ಮಾಡಿದೆ. ಇಂಗ್ಲೆಂಡ್​ ತಂಡದ ನಾಯಕತ್ವ ತ್ಯಜಿಸಿದ ಬಳಿಕ ಅದ್ಭುತವಾಗಿ ಬ್ಯಾಟ್​ ಬೀಸಿದ ಜೋ ರೂಟ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಪಕ್ಷದ ಹಿರಿಯ ಮುಖಂಡ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಚಿದಂಬರಂ ಟ್ವೀಟ್​:ನ್ಯೂಜಿಲ್ಯಾಂಡ್​ ವಿರುದ್ಧದದ ಮೊದಲ ಟೆಸ್ಟ್ ಪಂದ್ಯಲ್ಲಿ ಜೋ ರೂಟ್​ ಮತ್ತು ಬೆನ್​​ ಫೋಕ್ಸ್​ ಬ್ಯಾಟಿಂಗ್​ ಹಾಗೂ ಕಿವೀಸ್ ವಿರುದ್ಧ ಇಂಗ್ಲೆಂಡ್ ತಂಡವನ್ನ ಗೆಲುವಿನತ್ತ ಕೊಂಡೊಯ್ದ ರೀತಿ ನಿಜಕ್ಕೂ ಶ್ಲಾಘನೀಯ. ಅವರ ಜವಾಬ್ದಾರಿ, ಶಿಸ್ತು ಮತ್ತು ಬ್ಯಾಟಿಂಗ್​ ಪ್ರದರ್ಶನ ಅದ್ಭುತ ಎಂದು ಟ್ವೀಟ್ ಮಾಡಿದ್ದು, ಇದು ನಿಜವಾದ ವೃತ್ತಿಪರತೆ ಎಂದು ಹೇಳಿದ್ದಾರೆ.

ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನೀಡಿದ್ದ 277ರನ್​​​ಗಳ​ ಗುರಿ ಬೆನ್ನಟ್ಟಿದೆ ಇಂಗ್ಲೆಂಡ್ ಕೇವಲ 4 ವಿಕೆಟ್​ನಷ್ಟಕ್ಕೆ 69ರನ್​​ಗಳಿಕೆ ಮಾಡಿ, ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಮಾಜಿ ಕ್ಯಾಪ್ಟನ್ ರೂಟ್, ಬೆನ್​ ಸ್ಟೋಕ್ಸ್ ಹಾಗೂ ಬೆನ್​ ಫೋಕ್ಸ್​ ಜೊತೆ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, 5 ವಿಕೆಟ್​ಗಳ ಗೆಲುವಿಗೆ ಕಾರಣವಾದರು. ಅವರ ರೂಟ್​ ವೃತ್ತಿಪರತೆಗೆ ಇದೀಗ ಕಾಂಗ್ರೆಸ್ ಮುಖಂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಎರಡನೇ ಇನ್ನಿಂಗ್ಸ್​​ನಲ್ಲಿ 170 ಎಸೆತಗಳಲ್ಲಿ 115ರನ್​​ಗಳಿಕೆ ಮಾಡಿದ್ದ ರೂಟ್​, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಇದರ ಜೊತೆಗೆ 10 ಸಾವಿರ ರನ್​ ಪೂರೈಕೆ ಮಾಡಿದ ಇಂಗ್ಲೆಂಡ್​ನ ಎರಡನೇ ಹಾಗೂ ಒಟ್ಟಾರೆ 14ನೇ ಪ್ಲೇಯರ್​ ಆಗಿದ್ದಾರೆ.

ABOUT THE AUTHOR

...view details