ಲಾರ್ಡ್ಸ್: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯೋಜಿಸಿದ್ದ ಕ್ರಿಕೆಟ್ನ ಹೊಸ ಮಾದರಿ ದಿ ಹಂಡ್ರೆಡ್ ಲೀಗ್ನ ಮಹಿಳಾ ವಿಭಾಗದಲ್ಲಿ ಓವಲ್ ಇನ್ವಿನ್ಸಿಬಲ್ಸ್ ವುಮೆನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ
ದಕ್ಷಿಣ ಆಫ್ರಿಕಾದ ನಾಯಕಿ ಡ್ಯಾನ್ ವಾನ್ ನೀಕೆರ್ಕ್ ನಾಯಕತ್ವದ ಓವಲ್ ತಂಡ ಫೈನಲ್ನಲ್ಲಿ ಸದರ್ನ್ ಬ್ರೇವ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 100 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 121 ರನ್ಗಳಿಸಿತ್ತು. ನೀಕೆರ್ಕ್ 26 , ಫ್ರಾನ್ ವಿಲ್ಸನ್ 25, ಮರಿಜಾನ್ ಕಾಪ್ 26 ರನ್ಗಳಿಸಿದ್ದರು.
ಸದರ್ನ್ ಪರ ಶ್ರೂಬ್ಸೋಲ್ 3, ಲಾರೆನ್ ಬೆಲ್ 2 , ವೆಲ್ಲಿಂಗ್ಟನ್ ಮತ್ತು ಫಿ ಮೋರಿಸ್ ತಲಾ ಒಂದು ವಿಕೆಟ್ ಪಡೆದಿದ್ದರು.
122 ರನ್ಗಳ ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್ ತಂಡ ಓವಲ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 73 ರನ್ಗಳಿಗೆ ಆಲೌಟ್ ಆಗುವ ಮೂಲಕ 48 ರನ್ಗಳ ಸೋಲು ಕಂಡು ಚೊಚ್ಚಲ ಆವೃತ್ತಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.