ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹಾಗು ರಿಷಭ್ ಪಂತ್ ಸಮಯೋಚಿತ ಆಟದ ನೆರವಿನಿಂದ ಭಾರತ ತಂಡವು ಆತಿಥೇಯರನ್ನು 5 ವಿಕೆಟ್ಗಳಿಂದ ಮಣಿಸುವ ಮೂಲಕ ಸರಣಿ ವಶಪಡಿಸಿಕೊಂಡಿದೆ.
ವಿಂಡೀಸ್ ವಿರುದ್ದದ ಸರಣಿಯಲ್ಲಿ ಹೊಸಬರಿಗೆ ಅವಕಾಶ: ರೋಹಿತ್ ಶರ್ಮಾ - after india england third odi match rohit sharma statement
ಅವಕಾಶಕ್ಕಾಗಿ ಕಾಯುತ್ತಿರುವ ಭಾರತದ ಕೆಲವು ಆಟಗಾರರನ್ನು ವೆಸ್ಟ್ಇಂಡಿಸ್ ವಿರುದ್ದ ನಡೆಯಲಿರುವ ಪಂದ್ಯಗಳಲ್ಲಿ ಕಣಕ್ಕಿಳಿಸುವ ಕುರಿತು ರೋಹಿತ್ ಶರ್ಮಾ ಮಾತನಾಡಿದರು.
![ವಿಂಡೀಸ್ ವಿರುದ್ದದ ಸರಣಿಯಲ್ಲಿ ಹೊಸಬರಿಗೆ ಅವಕಾಶ: ರೋಹಿತ್ ಶರ್ಮಾ rohit sharma](https://etvbharatimages.akamaized.net/etvbharat/prod-images/768-512-15852577-thumbnail-3x2-vny.jpg)
ನಿನ್ನೆ ನಡೆದ ಪಂದ್ಯದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, "ಒಳ್ಳೆಯ ಫಾರ್ಮ್ನಲ್ಲಿರುವ ಆಟಗಾರರು ಅವಕಾಶ ದೊರೆಯದೆ ಬೆಂಚ್ ಕಾಯುತ್ತಿದ್ದಾರೆ. ಬೆಂಚ್ನಲ್ಲಿ ಕಾಯುತ್ತಿರುವವರು ಪಂದ್ಯಗಳಲ್ಲಿ ಕಾಣುವಂತಾಗಬೇಕು. ಪಂದ್ಯದ ಸಂದರ್ಭದಲ್ಲಿ ಗಾಯಗಳಾಗಿ ಆಟಗಾರರು ಹೊರಗುಳಿಯುವ ಸಾಧ್ಯತೆಗಳಿರುತ್ತವೆ. ಇಂತಹ ಸಮಯದಲ್ಲಿ ಬೆಂಚ್ ಬಲ ಹೆಚ್ಚಿಸಬೇಕಿರುತ್ತದೆ. ಈ ಬಾರಿ ವೆಸ್ಟ್ ಇಂಡೀಸ್ ವಿರುದ್ದ ನಡೆಯಲಿರುವ ಪಂದ್ಯಗಳಲ್ಲಿ ಉತ್ತಮ ಫಾರ್ಮ್ನಲ್ಲಿದ್ದು ಬೆಂಚ್ ಕಾಯುತ್ತಿರುವ ಭಾರತದ ಕೆಲವು ಆಟಗಾರನ್ನು ಆಯ್ಕೆ ಮಾಡಲಾಗಿದ್ದು ಪಂದ್ಯದಲ್ಲಿ ಅವಕಾಶ ದೊರೆಯಲಿದೆ" ಎಂದು ಹೇಳಿದರು.
ಇದನ್ನೂ ಓದಿ:ಹಾರ್ದಿಕ್ ಮಿಂಚು, ಪಂತ್ ಭರ್ಜರಿ ಶತಕ : ಸರಣಿ ಗೆದ್ದ ಭಾರತ