ಮುಂಬೈ :ಭಾರತ ಕಂಡಂತಹ ಶ್ರೇಷ್ಠ ನಾಯಕರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡು ಬರುವ ಮಹೇಂದ್ರ ಸಿಂಗ್ ಧೋನಿ ಇಂದಿಗೆ 16 ವರ್ಷಗಳ ಹಿಂದೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೊದಲ ಬಾರಿಗೆ ನಂಬರ್ 1 ಪಟ್ಟ ಅಲಂಕರಿಸಿದ್ದರು. 2004ರಲ್ಲಿ ಪದಾರ್ಪಣೆ ಮಾಡಿದ್ದ ಧೋನಿ ವೇಗವಾಗಿ ವಿಶ್ವದ ನಂಬರ್ 1 ಬ್ಯಾಟರ್ ಎನಿಸಿದ್ದರು.
2004ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನೀಳ ಕೂದಲ ಧೋನಿ ಕೇವಲ 38 ಇನ್ನಿಂಗ್ಸ್ಗಳಲ್ಲಿ ಏಕದಿನ ಕ್ರಿಕೆಟ್ನ ನಂಬರ್ 1 ಬ್ಯಾಟರ್ ಸ್ಥಾನವನ್ನು ಅಲಂಕರಿಸಿದ್ದರು. 2006ರ ಏಪ್ರಿಲ್ 20ರ ವೇಳೆ ಧೋನಿ ಭಾರತದ ಪರ 42 ಏಕದಿನ ಪಂದ್ಯವನ್ನಾಡಿ, 38 ಇನ್ನಿಂಗ್ಸ್ಗಳಿಂದ 52.76ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ 1372 ರನ್ಗಳಿಸಿದ್ದರು. 103ರ ಸ್ಟ್ರೈಕ್ರೇಟ್ನಲ್ಲಿ ಅಬ್ಬರಿಸಿದ್ದ ಧೋನಿ 2 ಶತಕ ಮತ್ತು 8 ಅರ್ಧಶತಕ ಸಿಡಿಸಿ ಏಕದಿನ ಇತಿಹಾಸದಲ್ಲಿ ವೇಗವಾಗಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.